Asianet Suvarna News Asianet Suvarna News

ಸ್ಮಶಾನ ಕಾರ್ಮಿಕರ ಜತೆ ಬ್ರೇಕ್‌ಫಾಸ್ಟ್‌ ಸವಿದ ಸಿಎಂ: ರಾಜೀವ್ ಚಂದ್ರಶೇಖರ್ ಕಾರ್ಯಕ್ರಮ ನೆನಪಿಸಿಕೊಂಡ ಬೊಮ್ಮಾಯಿ

ಈ ಉಪಹಾರ ಕೂಟದ ವೇಳೆ ರಾಜೀವ್ ಚಂದ್ರಶೇಖರ್ ಕಾರ್ಯಕ್ರಮವನ್ನು ಸಿಎಂ ನೆನಪಿಸಿಕೊಂಡಿದ್ದಾರೆ. ಸ್ಮಶಾನ ಕಾರ್ಮಿಕರನ್ನು ಈ ಹಿಂದೆ ರಾಜೀವ್ ಚಂದ್ರಶೇಖರ್ ಸನ್ಮಾನಿಸಿದ್ರು. ಇದನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ. 

chief minister basavaraj bommai breakfast with graveyard workers cm remembers rajeev chandrasekhar ash
Author
First Published Jan 11, 2023, 1:56 PM IST

ಸ್ಮಶಾನ ಕಾರ್ಮಿಕರ ಜತೆ ಇಂದು ಸಿಎಂ ಬಸವರಾಜ್‌ ಬೊಮ್ಮಾಯಿ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ಕಾರ್ಮಿಕರ ಜತೆ ಸಿಎಂ ಬ್ರೇಕ್​ಫಾಸ್ಟ್ ಮಾಡಿದ್ದು, ಉಪಹಾರಕ್ಕೂ ಮುನ್ನ ಕಾರ್ಮಿಕರು ಸಿಎಂ ಬೊಮ್ಮಾಯಿಗೆ ಸನ್ಮಾನ ಮಾಡಿದ್ದಾರೆ. ಈ ವೇಳೆ ಸಿಎಂಗೆ ಸತ್ಯ ಹರಿಶ್ಚಂದ್ರ ಪ್ರತಿಮೆಯನ್ನು ಕಾರ್ಮಿಕರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಉಪಹಾರ ಕೂಟದ ವೇಳೆ ರಾಜೀವ್ ಚಂದ್ರಶೇಖರ್ ಕಾರ್ಯಕ್ರಮವನ್ನು ಸಿಎಂ ನೆನಪಿಸಿಕೊಂಡಿದ್ದಾರೆ. ಸ್ಮಶಾನ ಕಾರ್ಮಿಕರನ್ನು ಈ ಹಿಂದೆ ರಾಜೀವ್ ಚಂದ್ರಶೇಖರ್ ಸನ್ಮಾನಿಸಿದ್ರು. ಇದನ್ನು ಸಿಎಂ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ. 

ಉಪಹಾರ ಕೂಟದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಉಪಹಾರ ಕೂಟದ ವೇಳೆ, ಕಾರ್ಮಿಕನನ್ನು ಮಾತನಾಡಿಸಿದೆ. ಹಾಗೂ, ಸಂಬಳ ಎಷ್ಟೆಂದು ಕೇಳಿದೆ. ಇದಕ್ಕೆ ಅವರು, ಸಂಬಳವೇ ಇಲ್ಲ, ನಾವು ನೌಕರರೂ ಅಲ್ಲ ಅಂತ ಅಳಲು ತೋಡಿಕೊಂಡರು. ಸ್ಮಶಾನ ಕಾರ್ಮಿಕರ ಬಗ್ಗೆ ಯಾವ ಸರ್ಕಾರವೂ ಗಮನಹರಿಸಿರಲಿಲ್ಲ. ಆದರೆ, ನಮ್ಮ ಸರ್ಕಾರ 117 ಸ್ಮಶಾನ ಕಾರ್ಮಿಕರನ್ನು ಕಾಯಂಗೊಳಿಸಿದೆ. ಅಲ್ಲದೆ, ಉಳಿದ 30 ಕಾರ್ಮಿಕರನ್ನು ಶೀಘ್ರವೇ ಕಾಯಂಗೊಳಿಸಲಾಗುವುದು. ಜತೆಗೆ 40 ಸಾವಿರ ಪೌರಕಾರ್ಮಿಕರನ್ನ ಕಾಯಂಗೊಳಿಸುವ ಚಿಂತನೆ ಇದೆ ಎಂದೂ ಬೆಂಗಳೂರಿನ ರೇಸ್‌ಕೋರ್ಸ್‌ ನಿವಾಸದಲ್ಲಿ ಹೇಳಿದರು. 

ಇದನ್ನು ಓದಿ: ಬಿಯಾಂಡ್ ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಯೋಜನೆ: ಸಿಎಂ ಬೊಮ್ಮಾಯಿ

ಅಲ್ಲದೆ, ಇನ್ಮುಂದೆ ಸ್ಮಶಾನ ಕಾರ್ಮಿಕರನ್ನು ‘ಸತ್ಯ ಹರಿಶ್ಚಂದ್ರ ಬಳಗದವರು’ ಎಂದು ಕರೆಯಬೇಕು ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು, ನನಗೆ ಯಾರು ಸತ್ಯ ಹರಿಶ್ಚಂದ್ರರ ಪ್ರತಿಮೆ ಕೊಟ್ಟಿರಲಿಲ್ಲ. ಈಗ ಸತ್ಯ ಹರಿಶ್ಚಂದ್ರರ ಪ್ರತಿಮೆಯನ್ನು ದೇವರ ಮನೆಯಲ್ಲಿಡುವೆ ಎಂದು ಸಿಎಂ ಬೊಮ್ಮಾಯಿ ಹೇಳಿಕೊಂಡಿದ್ದಾರೆ. 
 
ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ನೆನೆದ ಸ್ಮಶಾನ ಕಾರ್ಮಿಕರು
ಈ ಉಪಹಾರ ಕೂಟದ ವೇಳೆ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ ಅವರನ್ನು ಸ್ಮಶಾನ ಕಾರ್ಮಿಕರು ನೆನೆಸಿಕೊಂಡಿದ್ದಾರೆ. ಸಿಎಂ ಉಪಹಾರ ಕೂಟದ ಬಳಿಕ ಕಾರ್ಮಿಕ ರಾಜ್ ಎಂಬುವರು ಮಾತನಾಡಿದ್ದು, ಕೋವಿಡ್ ವೇಳೆ ರಾಜೀವ್ ಚಂದ್ರಶೇಖರ್ ನಮ್ಮ ಮನೆಗೆ ಬಂದಿದ್ರು. ನಮ್ಮ ಮನೆಗೆ ಬರೋದಕ್ಕೆ ಜನರೇ ಹಿಂದೆ ಮುಂದೆ ನೋಡ್ತಾರೆ. ಅಂಥದ್ರಲ್ಲಿ ರಾಜೀವ್​ ಸರ್​ ನಮ್ಮ ಮನೆಗೆ ಹುಡ್ಕೊಂಡು ಬಂದಿದ್ದರು. ರಾಜೀವ್​ ಚಂದ್ರಶೇಖರ್​​ರನ್ನು ಮರೆಯೋದಕ್ಕೆ ಆಗೋದಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ ಅವರನ್ನು ನೆನಪಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಕನ್ನಡ ಭಾಷೆಗೆ ಶೀಘ್ರ ಕಾನೂನು ಬಲ: ಸಿಎಂ ಬೊಮ್ಮಾಯಿ

ಅಲ್ಲದೆ, ನಮ್ಮ ಬೆಂಗಳೂರು ಫೌಂಡೇಷನ್‌ನಿಂದ ನನಗೆ ಪ್ರಶಸ್ತಿ ನೀಡಿದ್ರು. ಈ ವೇಳೆ, ಕಾರ್ಯಕ್ರಮಕ್ಕೆ ಬಂದಿದ್ದ ಸಿಎಂ ನಮ್ಮ ಕಷ್ಟ ಆಲಿಸಿದ್ದರು. ಈಗ, ಸಿಎಂ ತಮ್ಮ ಮನೆಗೆ ಕರೆದು ನಮಗೆಲ್ಲ ಊಟ ಹಾಕಿದ್ದಾರೆ. ಈ ಹಿನ್ನೆಲೆ ರಾಜೀವ್ ಚಂದ್ರಶೇಖರ್ ಅವರು ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸ್ತೇವೆ ಎಂದು ಸಿಎಂ ಉಪಹಾರ ಕೂಟದ ಬಳಿಕ ಕಾರ್ಮಿಕ ರಾಜ್ ಹೇಳಿದ್ದಾರೆ. 

ಈ ನಡುವೆ, ಆರ್ಥಿಕ ಹಿನ್ನಡೆಯಿಂದ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ಕಾರ್ಮಿಕರಿಗೆ 2022-23 ನೇ ಸಾಲಿನ ನೇಕಾರ ಸಮ್ಮಾನ್ 5, 000 ರೂ.ಗಳ ವಾರ್ಷಿಕ ಆರ್ಥಿಕ ನೆರವನ್ನು ಡಿಬಿಟಿ ಮುಖಾಂತರ ಒದಗಿಸಲಾಗುವುದು ಎಂದು ತಿಳಿದುಬಂದಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದ್ಯುತ್ ಮಗ್ಗ ನೇಕಾರರಿಗೆ/ ಕಾರ್ಮಿಕರಿಗೆ ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವನ್ನು ನೇರ ನಗದು (ಡಿಬಿಟಿ) ಮೂಲಕ ವರ್ಗಾವಣೆಗೆ ಜನವರಿ 11 ರಂದು ಬೆಳಿಗ್ಗೆ 11.30 ಗಂಟೆಗೆ ಗೃಹ  ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಲಿದ್ದಾರೆ. 

ಇದನ್ನೂ ಓದಿ: Dalit CM: ಬಿಜೆಪಿಯವರು ಏಕೆ ;ದಲಿತ ಸಿಎಂ' ಘೋಷಣೆ ಮಾಡಬಾರದು? ಡಾ.ಜಿ.ಪರಮೇಶ್ವರ್ ಸವಾಲು

Follow Us:
Download App:
  • android
  • ios