Asianet Suvarna News Asianet Suvarna News

ಭುಗಿಲೆದ್ದ ಆಕ್ರೋಶ, ವಿಐಪಿಗಳ ‘ಬ್ಲೂ ಟಿಕ್‌’ ವಾಪಸ್‌, ಏನಿದು ಟ್ವೀಟರ್ ಮಸಲತ್ತು..?

- ಉಪರಾಷ್ಟ್ರಪತಿ ನಾಯ್ಡು, ಆರೆಸ್ಸೆಸ್‌ ನಾಯಕರ ‘ಬ್ಲೂ ಟಿಕ್‌’ ದಿಢೀರ್‌ ರದ್ದು: ಟ್ವೀಟರ್‌ ವಿವಾದ

- 6 ತಿಂಗಳಿನಿಂದ ಟ್ವೀಟರ್‌ ಬಳಸದಿದ್ದಕ್ಕೆ ಬ್ಲೂ ಬ್ಯಾಡ್ಜ್‌ ತೆಗೆದಿದ್ದೇವೆ: ಸೋಷಿಯಲ್‌ ಮೀಡಿಯಾ ಸ್ಪಷ್ಟನೆ

- ಆಕ್ರೋಶ ಭುಗಿಲೆದ್ದ ಬಳಿಕ ‘ಬ್ಲೂ ಟಿಕ್‌’ ವಾಪಸ್‌

ಬೆಂಗಳೂರು (ಜೂ. 06):  ಕೇಂದ್ರ ಸರ್ಕಾರದ ಜೊತೆ ಆಗಾಗ ಸಂಘರ್ಷಕ್ಕಿಳಿಯುವ ಟ್ವೀಟರ್‌ ಸಂಸ್ಥೆ, ವಿವಾದಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಐವರು ಆರ್‌ಎಸ್‌ಎಸ್‌ ನಾಯಕರ ಖಾಸಗಿ ಖಾತೆಗಳಿಗೆ ನೀಡಿದ್ದ ‘ಬ್ಲೂ ಟಿಕ್‌ ಬ್ಯಾಡ್ಜ್‌’ ತೆಗೆದುಹಾಕುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದೆ. ಈ ವಿಷಯ ಕೇಂದ್ರ ಸರ್ಕಾರ ಹಾಗೂ ಆರೆಸ್ಸೆಸ್‌ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾಗುತ್ತಲೇ ಎಚ್ಚೆತ್ತ ಟ್ವೀಟರ್‌ ಸಂಸ್ಥೆಯು ವೆಂಕಯ್ಯನಾಯ್ಡು ,ಮೋಹನ ಭಾಗವತ್‌ ಹಾಗೂ ಇತರರ ಬ್ಲೂ ಟಿಕ್‌ ಬ್ಯಾಡ್ಜ್‌ ಮರಳಿಸಿದೆ.

ಬ್ಲೂಟಿಕ್ ಮಾರ್ಕ್ ತೆಗೆಯುವಲ್ಲೂ ರಾಜಕೀಯ ಮಾಡಿದ ಟ್ವಿಟರ್!

ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವೀಟರ್‌, ‘2020ರ ಜುಲೈನಿಂದ ನಾಯ್ಡು ಅವರು ತಮ್ಮ ವೈಯಕ್ತಿಕ ಖಾತೆ ಬಳಸಿರಲಿಲ್ಲ. ಇತರರ ಖಾತೆಗಳು ಕೂಡ ಬಳಕೆ ಆಗಿರಲಿಲ್ಲ. 6 ತಿಂಗಳಿಗೆ ಒಮ್ಮೆಯಾದರೂ ಲಾಗಿನ್‌ ಮಾಡಿ ಬಳಸಬೇಕು. ಹೀಗಾಗಿ ಅವರ ಬ್ಲೂ ಬ್ಯಾಡ್ಜ್‌ ತೆಗೆದುಹಾಕಲಾಗಿತ್ತು. ಈಗ ಮರಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ. ಟ್ವಿಟರ್ ಹೇಳುತ್ತಿರುವುದು ನಿಜನಾ..? ಅಥವಾ ಹಿಂದೆ ಬೇರೆ ಏನಾದರೂ ಕಾರಣ ಇದೆಯಾ.? ಇಲ್ಲಿದೆ ಡಿಟೇಲ್ಸ್..