ರಿಲಯನ್ಸ್‌ನಿಂದ ಅತೀ ಅಗ್ಗದ ಸ್ಮಾರ್ಟ್‌ಫೋನ್, ಇದರಲ್ಲಿದೆ ಸೂಪರ್ ಸ್ಪೆಷಾಲಿಟಿ..!
- ಗಣೇಶ ಹಬ್ಬಕ್ಕೆ ರಿಲಯನ್ಸ್‌ನಿಂದ ವಿಶ್ವದ ಅಗ್ಗದ ಸ್ಮಾರ್ಟ್ ಫೋನ್ ‘ಜಿಯೋಫೋನ್ ನೆಕ್ಸ್ಟ್’ ಬಿಡುಗಡೆ
- ರಿಲಯನ್ಸ್ ಜಿಯೋ ಮತ್ತು ಗೂಗಲ್ ಜಂಟಿಯಾಗಿ ‘ಜಿಯೋಫೋನ್ ನೆಕ್ಸ್ಟ್’ ಅನ್ನು ಅಭಿವೃದ್ಧಿಪಡಿಸಿದೆ
- ಭಾರತವನ್ನು 2 ಜಿ ಮುಕ್ತ ಮಾಡಿ ದೇಶದೆಲ್ಲೆಡೆ 5ಜಿ ಜಾರಿಗೊಳಿಸುವ ಗುರಿ
ನವದೆಹಲಿ (ಜೂ. 26): ಅಗ್ಗದ ದರದಲ್ಲಿ 4ಜಿ ಇಂಟರ್ನೆಟ್ ಸೇವೆ ಒದಗಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇದೀಗ ವಿಶ್ವದ ಅತಿ ಅಗ್ಗದ ಸ್ಮಾರ್ಟ್ ಫೋನ್ ಬಿಡುಗಡೆಗೆ ಸಜ್ಜಾಗಿದೆ. ಗಣೇಶ ಚತುರ್ಥಿಯ ದಿನ ಸೆ.10 ರಂದು ರಿಲಯನ್ಸ್ನ ಮೊಟ್ಟಮೊದಲ ಸ್ಮಾರ್ಟ್ ಫೋನ್ ಆದ ‘ಜಿಯೋಫೋನ್ ನೆಕ್ಸ್ಟ್’ ಬಿಡುಗಡೆ ಆಗಲಿದೆ.
ಐಕ್ಯೂ ಜೆಡ್3 5 ಜಿ: ಇದು ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಸ್ಮಾರ್ಟ್‌ಫೋನ್!
ಸ್ವದೇಶಿ ನಿರ್ಮಿತ 5ಜಿ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಿದ್ದು, ಭಾರತದಲ್ಲಿ 5ಜಿ ಸೇವೆಯನ್ನು ಬಿಡುಗಡೆ ಮಾಡಲಿರುವ ಮೊದಲ ಸಂಸ್ಥೆ ಎನಿಸಿಕೊಳ್ಳಲಿದೆ. 5ಜಿ ಜಾರಿಗೆ ರಿಲಯನ್ಸ್ ಗೂಗಲ್ ಕ್ಲೌಡ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಿದೆ. ರಿಲಯನ್ಸ್ ರಿಟೇಲ್, ಜಿಯೋ ಸಾವನ್ ಮತ್ತು ಜಿಯೋ ಹೆಲ್ತ್‌ಗೂ ಗೂಗಲ್ ಕ್ಲೌಡ್ ಬಳಕೆ ಆಗಲಿದೆ.