ಐಕ್ಯೂ ಜೆಡ್3 5ಜಿ: ಇದು ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಸ್ಮಾರ್ಟ್‌ಫೋನ್!

ವಿವೋ ಸಬ್ ಬ್ರ್ಯಾಂಡ್ ಐಕ್ಯೂ ಜೆಡ್ 3 5ಜಿ ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಪ್ರೊಸೆಸರ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಿದೆ. ಬೆಲೆಯೂ ತೀರಾ ತುಟ್ಟಿಯೇನಲ್ಲ.

iQoo z3 is a India's firs Qualcomm snapdragon 768g smartphone

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ ಸಬ್ ಬ್ರ್ಯಾಂಡ್ ಐಕ್ಯೂ ನಿಧಾನವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. ಹಲವು ಗ್ರಾಹಕಸ್ನೇಹಿ ಮತ್ತು ಅವರ ಜೇಬಿಗೆ ತೀರಾ ಹೊರೆಯಾಗದಂಥ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಮನಸ್ಸನ್ನು ಗೆಲ್ಲುತ್ತಿದೆ.

ಈ ಸಾಲಿಗೆ ಐಕ್ಯೂ ಜೆಡ್ 3 5ಜಿ ಸ್ಮಾರ್ಟ್‌ಫೋನ್ ಸೇರ್ಪಡೆಯಾಗಿದೆ. ಈಗಾಗಲೇ ಮೂರು ಸ್ಮಾರ್ಟ್‌ಫೋನ್‌ಗಳ ಮೂಲಕ ತನ್ನದೇ ಗ್ರಾಹಕ ವಲಯವನ್ನು ಐಕ್ಯೂ ಸೃಷ್ಟಿಸಿಕೊಂಡಿದೆ. ಇದೀಗ ಐಕ್ಯೂ ಜೆಡ್‌ 3 5ಜಿ ಸ್ಮಾರ್ಟ್‌ಪೋನ್ ಬಳಕೆದಾರರ ಮನಸ್ಸಿಗೆ ಲಗ್ಗೆ ಹಾಕಿದೆ.  ಐಕ್ಯೂ ಜೆಡ್ 3 ಸ್ಮಾರ್ಟ್‌ಫೋನ್ ಭಾರತದ ಮೊದಲ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768ಜಿ ಪ್ರೊಸೆಸರ್ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಿದೆ.

ವಿಶೇಷ ಎಂದರೆ, ಐಕ್ಯೂ ಬಿಡುಗಡೆ ಮಾಡಿರುವ ನಾಲ್ಕೂ ಸ್ಮಾರ್ಟ್‌ಫೋನ್‌ಗಳು 5ಜಿ ತಂತ್ರಜ್ಞಾನ ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳಾಗಿವೆ.  ಹಾಗಾಗಿ, ಕಡಿಮೆ ಬಜೆಟ್‌ ಸ್ಮಾರ್ಟ್‌ಫೋನ್‌ನಲ್ಲಿ 5ಜಿ ತಂತ್ರಜ್ಞಾನ ಸೇವೆಯನ್ನು ಒದಗಿಸುವ ಮೂಲಕ ಐಕ್ಯೂ ಮುಂದಾಗಿದೆ ಎಂದು ಹೇಳಬಹುದು.

ಜೂ.24ಕ್ಕೆ ಹೊಸ ವಿಂಡೋಸ್ 11 ಲಾಂಚ್, ಡಾರ್ಕ್ ಮೋಡ್ ಇರಲಿದೆಯಾ?

ಈಗ  ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಕ್ಯೂ ಜೆಡ್ 3  ಸ್ಮಾರ್ಟ್‌ಫೋನ್‌ನಲ್ಲಿ ವಿವೋ ಫನ್‌ಟಚ್ ಆಪರೇಟಿಂಗ್ ಸಾಫ್ಟ್‌ವೇರ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 768 ಪ್ರೊಸೆಸರ್ ಇದೆ. ಹಾಗಾಗಿಯೇ ಐಕ್ಯೂ ಜೆಡ್ 3 ವೇಗವಾಗಿ ಮತ್ತು ದಕ್ಷವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಐಕ್ಯೂ ಜೆಡ್ 3 ಸ್ಮಾರ್ಟ್‌ಪೋನ್ 6.5 ಇಂಚಿನ ಸ್ಕ್ರೀನ್ ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಕೈಯಲ್ಲಿ ನಿಮಗೆ ಈ ಫೋನ್ ಹೊಸ ಅನುಭವವನ್ನು ನೀಡುತ್ತದೆ ಎಂದು ಹೇಳಬಹುದು. ಕಂಪನಿಯು ಈ ಸ್ಮಾರ್ಟ್‌ಫೋನ್‌ಗೆ 4,400 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಿದೆ. 55 ವಾರ್ಪ್  ಚಾರ್ಜರ್ ಇದೆ. ವೇಗವಾಗಿ ಚಾರ್ಜ್ ಮಾಡಬಹುದಾದ  ಸೌಲಭ್ಯ ಈಗ ಅವಶ್ಯವಾದ್ದರಿಂದ 30 ನಿಮಿಷದಲ್ಲಿ ಈ ಐಕ್ಯೂ ಜೆಡ್ 3 ಸ್ಮಾರ್ಟ್‌ಫೋನ್ ಶೇ.60ರಷ್ಟು ಚಾರ್ಜ್ ಆಗುತ್ತದೆ. ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಅಂದರೆ ಶ .100ರಷ್ಟು ಚಾರ್ಜ್ ಆಗುತ್ತದೆ. ಅಷ್ಟೊಂದು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಇದು ಹೊಂದಿದೆ. 
 

iQoo z3 is a India's firs Qualcomm snapdragon 768g smartphone

ಇನ್ನು ಈ ಐಕ್ಯೂ ಜೆಡ್ 3 ಸ್ಮಾರ್ಟ್‌ಫೋನ್  ಬಗ್ಗೆ ಹೇಳುವುದಾದರೆ ಮೂರು ಕ್ಯಾಮೆರಾಗಳ ಸೆಟ್‌ ಅಪ್ ಅನ್ನು ನೀವು ಫೋನಿನ ಹಿಂಬದಿಯಲ್ಲಿ ಕಾಣಬಹುದು. ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್  ಕ್ಯಾಮೆರಾ ಆಗಿದೆ. ಉಳಿದರೆಡು ಕ್ಯಾಮೆರಾಗಳು 8 ಮೆಗಾ ಪಿಕ್ಸೆಲ್ ಮತ್ತು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಈ ಕ್ಯಾಮೆರಾಗಳ ಕ್ವಾಲಿಟಿಯೂ ಅತ್ಯದ್ಭುತವಾಗಿದೆ. ಆದರೆ, ಕಡಿಮೆ ಬೆಳಕಿನಲ್ಲಿ ಉತ್ಕೃಷ್ಟತೆಯನ್ನು ನಿರೀಕ್ಷಿಸುವಂತಿಲ್ಲ ಎನ್ನುತ್ತಾರೆ ತಜ್ಞರು. ಇದನ್ನು ಹೊರತುಪಡಿಸಿ ನೀವು ಚೆಂದದ ಫೋಟೋಗಳನ್ನು ಈ ಕ್ಯಾಮೆರಾಗಳ ಮೂಲಕ ಸೆರೆ ಹಿಡಿಯಬಹುದು.

ಆಗಸ್ಟ್ 3ಕ್ಕೆ ಹಲವು ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ಗಳು ಲಾಂಚ್?

ಸೆಲ್ಫಿ ಕ್ಯಾಮೆರಾಗಾಗಿ ಈ ಸ್ಮಾರ್ಟ್‌ಫೋನ್ ಫ್ರಂಟ್‌ನಲ್ಲಿ ಕಂಪನಿಯು 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವುದರಿಂದ ಸಹಜವಾಗಿಯೇ ನೀವು ಅತ್ಯುತ್ತಮ ಸೆಲ್ಫಿ ಫೋಟೋಗಳನ್ನು ನಿರೀಕ್ಷಿಸಬಹುದು. ವಿಡಿಯೋ ಕಾಲ್‌ಗೂ ಇದು ಅದ್ಭುತವಾಗಿರುತ್ತದೆ.

ಐಕ್ಯೂ ಜೆಡ್ 3 ಎರಡು ವೆರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. 4 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ರ್ಯಾಮ್  ಮತ್ತು 128 ಜಿಬಿ ಸ್ಟೋರೇಜ್‌ಗಳ ಮಾದರಿಯಲ್ಲಿ ಮಾರಾಟಕ್ಕೆ ಸಿಗಲಿದೆ. ನಿಮಗೆ ಸ್ಟೋರೇಜ್‌ ಸಾಮರ್ಥ್ಯ ಇನ್ನೂ ಬೇಕೆಂದರೆ, ಕಂಪನಿಯು ಸ್ಮಾರ್ಟ್‌ಫೋನ್‌ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಒದಗಿಸಿದೆ. ಅದರ ಮೂಲಕ ನೀವು ಹೆಚ್ಚುವರಿ ಮೆಮೋರಿಯನ್ನು ಒಂದು ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ನ ಬೆಲೆ ತೀರಾ ತುಟ್ಟಿಯೇನಲ್ಲ. 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ವೆರಿಯೆಂಟ್ ಫೋನ್ ಬೆಲೆ 19,990 ರೂಪಾಯಿ ಇದ್ದರೆ, 8 ಜಿಬಿ ರ್ಯಾಮ್‌ ಮತ್ತು 128 ಸ್ಟೋರೇಜ್ ಮಾದರಿಯ ಬೆಲೆ 20,990 ರೂಪಾಯಿ ಇದೆ. ಈ ಸೆಗ್ಮೆಂಟ್‌ನ ಇತರ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಈ ಬೆಲೆ ತುಸು ಅಗ್ಗವೇ ಎಂದು ಹೇಳಬಹುದು.

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

Latest Videos
Follow Us:
Download App:
  • android
  • ios