Asianet Suvarna News Asianet Suvarna News

ಸೆಮಿಕಾನ್ ಇಂಡಿಯಾ 2022: ರಾಜ್ಯದಲ್ಲಿ ಸ್ಥಾಪನೆಯಾಗಲಿದೆ ಸೆಮಿಕಂಡಕ್ಟರ್ ಘಟಕ

ಬೆಂಗಳೂರಿನಲ್ಲಿ ನಡೆದ ಸೆಮಿಕಾನ್ ಇಂಡಿಯಾ 2022 ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಗಮನ ಸೆಳೆದಿರುವ ಕರ್ನಾಟಕ ಶೀಘ್ರದಲ್ಲೇ ದೇಶದ ಮೊದಲ ಹಾಗೂ ಅತ್ಯಂತ ಬೃಹತ್‌ ಸೆಮಿ ಕಂಡಕ್ಟರ್‌ ಘಟಕದ ತವರೂರಾಗಲಿದೆ.

ಬೆಂಗಳೂರು (ಮೇ. 02): ರಾಜಧಾನಿಯಲ್ಲಿ ನಡೆದ ಸೆಮಿಕಾನ್ ಇಂಡಿಯಾ 2022 ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಗತ್ತಿನ ಗಮನ ಸೆಳೆದಿರುವ ಕರ್ನಾಟಕ ಶೀಘ್ರದಲ್ಲೇ ದೇಶದ ಮೊದಲ ಹಾಗೂ ಅತ್ಯಂತ ಬೃಹತ್‌ ಸೆಮಿ ಕಂಡಕ್ಟರ್‌ ಘಟಕದ ತವರೂರಾಗಲಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ 4'ENBA' ಪ್ರಶಸ್ತಿ, ಬೆಸ್ಟ್ ಕರೆಂಟ್ ಅಫೇರ್ಸ್‌ನಲ್ಲಿ ಚಿನ್ನ

ಬರೋಬ್ಬರಿ 22900 ಕೋಟಿ ರು. ಬಂಡವಾಳ ಹೂಡಿಕೆಯೊಂದಿಗೆ ಕರುನಾಡಿನಲ್ಲಿ ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಲು ಅಬುಧಾಬಿ ಮೂಲದ ನೆಕ್ಸ್ಟ್‌ಆರ್ಬಿಟ್‌ ವೆಂಚ​ರ್‍ಸ್ ಸಂಸ್ಥೆ ಸಾರಥ್ಯದ ಹೂಡಿಕೆದಾರರ ಒಕ್ಕೂಟವಾಗಿರುವ ಐಎಸ್‌ಎಂಸಿ ಮುಂದೆ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಐಎಸ್‌ಎಂಸಿ ಹಾಗೂ ರಾಜ್ಯ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಬಿದ್ದಿದೆ.

 

Video Top Stories