Asianet Suvarna News Asianet Suvarna News

ಕೊರೋನಾ ಸಂಕಷ್ಟ: ಎಫ್ ಹಣ, ವಿತ್ ಡ್ರಾ ಹೇಗೆ?

* ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದರೆ ಇಪಿಎಫ್ ವಿತ್ ಡ್ರಾ ಮಾಡಿಕೊಳ್ಳಿ
* ಉಮಂಗ್ ಅಪ್ಲಿಕೇನ್ ಮೂಲಕ ಸರಳ ಸೂತ್ರ
* ಮೊಬೈಲ್ ಆ್ಯಪ್ ಬಳಸಿ ವಿತ್ ಡ್ರಾ ಸುಲಭ

ನವದೆಹಲಿ(ಮೇ  27)  ಕೊರೋನಾ ಕಾಲದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದರೆ ಉದ್ಯೋಗಿ ತನ್ನ ಇಪಿಎಫ್ (Employees Provident Fund) ವಿತ್ ಡ್ರಾ ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಹೇಳಿತ್ತು.

ಇಪಿಎಫ್ ನಿಯಮದಲ್ಲಿ ಮಹತ್ವದ ಬದಲಾವಣೆ

ಹಾಗಾದರೆ ಹೇಗೆ ವಿತ್ ಡ್ರಾ ಮಾಡಿಕೊಳ್ಳುವುದು ಎನ್ನುವುದನ್ನು ಈಗ ತಿಳಿಸಿದೆ. ಉಮಂಗ್ ಆ್ಯಪ್ ಮೂಲಕ ಅತ್ಯಂತ ಸರಳವಾಗಿ ವಿತ್ ಡ್ರಾ ಸಾಧ್ಯವಿದೆ.  ಉಮಂಗ್ ಆ್ಯಪ್ ನೋಂದಣಿ ಮಾಡಿಕೊಂಡು ನಿಮ್ಮ ದೂರವಾಣಿ ಸಂಖ್ಯೆ ಮೂಲಕ ಲಾಗ್ ಇನ್ ಆಗಬೇಕು. ಡಿಪಾರ್ಟ್‌ಮೆಂಟ್ ಆಯ್ಕೆಯಲ್ಲಿ ಇಪಿಎಫ್ಓ ಮೇಲೆ ಕ್ಲಿಕ್ ಮಾಡಬೇಕು .  ನಂತರ ‘Employee Centric’ ಆಯ್ಕೆಯಲ್ಲಿ Raise Claim ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ನಿಮ್ಮ ಯುಎಎನ್ ನಂಬರ್ ಎಂಟ್ರಿ ಮಾಡಿದರೆ ಓಟಿಪಿಯೊಂದು ಜನರೇಟ್ ಆಗಲಿದೆ. ನಂತರ ನಿಮಗೆ ಬೇಕಾದ ಮೊತ್ತದ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. 

Video Top Stories