ಪಿಎಫ್ ನಿಯಮದಲ್ಲಿ ಮಹತ್ವದ ಬದಲಾವಣೆ: ನೌಕರರಿಗೆ ಸಂತಸ!
ಪಿಎಫ್ ವರ್ಗಾವಣೆಗೆ ಉದ್ಯೋಗಿ ಹಳೇ ಕಂಪನಿ ಮೇಲೆ ಅವಲಂಬಿಸಬೇಕಿಲ್ಲ| ಇಪಿಎಫ್‌ಒ ಖಾತೆಗೆ ಲಾಗಿನ್ ಆಗಿ ಪಿಎಫ್ ಸಮಾಪ್ತಿಗೊಳಿಸಿದ ದಿನಾಂಕವನ್ನು ಅಪ್‌ಡೇಟ್ ಮಾಡಿ
ನವದೆಹಲಿ(ಮಾ.09): ನೌಕರರ ಭವಿಷ್ಯ ನಿಧಿ (ಪಿಎಫ್) ಯನ್ನು ವರ್ಗಾಯಿಸಲು ಅಥವಾ ಹಿಂಪಡೆದುಕೊಳ್ಳಲು ನೌಕರರು ತಾವು ಈ ಹಿಂದೆ ಕೆಲಸ ಮಾಡಿದ್ದ ಕಂಪನಿಯ ಮೇಲೆ ಅವಲಂಬಿತವಾಗಿಬೇಕಾಗಿಲ್ಲ. ಇಪಿಎಫ್‌ಒ ಖಾತೆಗೆ ಲಾಗಿನ್ ಆಗಿ ಪಿಎಫ್ ಸಮಾಪ್ತಿಗೊಳಿಸಿದ ದಿನಾಂಕವನ್ನು ಅಪ್‌ಡೇಟ್ ಮಾಡುವ ಮೂಲಕ ಬಾಕಿ ಇರುವ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಇಷ್ಟು ದಿನ ಉದ್ಯೋಗಿಯ ಪಿಎಫ್ ಖಾತೆಯನ್ನು ಸಮಾಪ್ತಿಗೊಳಿಸಿದ ದಿನಾಂಕವನ್ನು ಕಂಪನಿಗಳೇ ಅಪ್‌ಡೇಟ್ ಮಾಡಬೇಕಾಗಿತ್ತು. ಆ ಬಳಿಕವೇ ಅದನ್ನು ವರ್ಗಾಯಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಪಿಎಫ್ ಹಣ ವಿಥ್‌ಡ್ರಾವಲ್‌ಗೆ ಉದ್ಯೋಗಿಗಳು ಹಳೆಯ ಕಂಪನಿಯ ಮೇಲೆ ಅವಲಂಬಿತವಾಗಬೇಕಿತ್ತು.
ನೂತನ ನಿಯಮದ ಪ್ರಕಾರ, ಇಪಿಎಫ್‌ಒ ವೆಬ್‌ಸೈಟ್‌ಗೆ ಲಾಗಿನ್ ಆಗಿ ಉದ್ಯೋಗಿಯೇ ಸ್ವತಃ ಖಾತೆಯನ್ನು ನಿರ್ವಹಿಸಬಹುದಾಗಿದೆ.
Missed Call ಕೊಟ್ಟು ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಿ
ಈಗ ನೀವು ಕೇವಲ ಒಂದು ಮಿಸ್ಡ್ ಕಾಲ್ ನಿಡಿ ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಪಿಎಫ್ ಅಕೌಂಟ್ ನೋಂದಾಯಿಸಿದ ಮೊಬೈಲ್ ನಂಬರ್‌ನಿಂದ 011-22901406 ನಂಬರ್‌ಗೆ ಮಿಸ್ಟ್ ಕಾಳ್ ನೀಡಿ. ಇದಾದ ಬಳಿಕ ನಿಮ್ಮ ಪಿಎಫ್ ಮೊತ್ತದ ಮಾಹಿತಿ ನೀಡುವ ಮೆಸೇಜ್ ನಿಮಗೆ ತಲುಪುತ್ತದೆ.