ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್: ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ!

ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್. ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ ಮಾಡಿದ್ದು, ಯಾದಗಿರಿಯ ನಾರಾಯಣಪುರ ಪೊಲೀಸ್ ಠಾಣೆ ಕಥೆ ಇದು.

Share this Video
  • FB
  • Linkdin
  • Whatsapp

ಯಾದಗಿರಿ (ಅ.14): ರೌಡಿ ಶೀಟರ್​ನಿಂದ ಪೊಲೀಸ್ ಠಾಣೆಯಲ್ಲಿ ರಾಜ ದರ್ಬಾರ್. ಆತನ ಜೊತೆ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ದೋಸ್ತಿ ಮಾಡಿದ್ದು, ಯಾದಗಿರಿಯ ನಾರಾಯಣಪುರ ಪೊಲೀಸ್ ಠಾಣೆ ಕಥೆ ಇದು. ಹೌದು ಕಾನೂನು ಸುವ್ಯವಸ್ಥೆ ಹಾಳು ಮಾಡುವವರ ಜೊತೆ ಪಿಎಸ್​ಐ ಸ್ನೇಹ ಮಾಡಿದ್ದು, ನಾರಾಯಣಪುರ ಪಿಎಸ್ಐ ರಾಜಶೇಖರ್ ಮಾಡ್ತಿರೋದೇನು..? ರೌಡಿ ಶೀಟರ್ ನಾಗರಾಜ್ ಜೊತೆ ಸಬ್ ಇನ್ಸ್​ಪೆಕ್ಟರ್​​ಗೇನು ನಂಟಿದೆ ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಠಾಣೆ ಆವರಣದಲ್ಲೇ ರೌಡಿಶೀಟರ್ ನಾಗರಾಜ್ ಶೆಟಲ್ ಕಾಕ್ ಆಟ ಆಡಿದ್ದಲ್ಲದೇ ಸ್ಟೇಷನ್​​​ನಲ್ಲಿ ಪಿಎಸ್ಐ ಜೊತೆ ಠಾಣೆ ಆವರಣದಲ್ಲೇ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ್ದಾನೆ.

ಸದ್ಯ ಆಟಾಟೋಪಕ್ಕೆ ಸಾಕ್ಷಿಯಾಗಿ ವಿಡಿಯೋ, ಫೋಟೋ ನಿಂತಿವೆ. ಇನ್ನು ಕಳೆದ 3 ತಿಂಗಳ ಹಿಂದೆ ಓರ್ವನ ಮೇಲೆ ಹಲ್ಲೆ ನಾಗರಾಜ್ ನಡೆಸಿದ್ದ. ಹಲ್ಲೆಗೊಳಗಾದ ಬಸವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲಿಸರು ಪ್ರಕರಣ ದಾಖಲಿಸಿರಲಿಲ್ಲ. ತನ್ನ ಪ್ರಭಾವ ಬಳಸಿ ಕೇಸ್ ಆಗದಂತೆ ರೌಡಿಶೀಟರ್ ನಾಗಾರಾಜ ಮಾಡಿದ್ದ. ಪಿಎಸ್ಐ ರೌಡಿ ಜೊತೆ ಇಷ್ಟೊಂದು ಅನ್ಯೋನ್ಯವಾಗಿದ್ರೆ ಜನರ ಪರಿಸ್ಥಿತಿ ಏನು..? ಗೃಹ ಸಚಿವರೇ ಏನ್ ಮಾಡ್ತಿದ್ದೀರಿ ಎಂದು ಯಾದಗಿರಿ ಜನರು ಇದೀಗ ಪ್ರಶ್ನೆ ಮಾಡಿದ್ದಾರೆ.

Related Video