Drought: ಕರ್ನಾಟಕದಲ್ಲಿ 122 ವರ್ಷಗಳಲ್ಲೇ 3ನೇ ಅತೀ ಭೀಕರ ಬರ! ಮುಂಗಾರು ಮಳೆ ಕೈಕೊಟ್ಟ ಎಫೆಕ್ಟ್ ರಾಜ್ಯಕ್ಕೆ ಬರೆ..!

ಹಾವೇರಿಯಲ್ಲಿ ನೀರಿಗಾಗಿ ಜನರ ಹಾಹಾಕಾರ..!
ಅವಳಿ ನಗರಕ್ಕೂ ತಟ್ಟಿದ ಜಲಕ್ಷಾಮದ ಭಯ..!
ಧಗಧಗ ಬಿಸಿಲಿಗೆ ಹೈರಾಣಾದ ಬೆಣ್ಣೆನಗರಿ ಜನ..!
ಹನಿ ನೀರಿಲ್ಲದೇ ದಾವಣಗೆರೆ ಜನತೆ ಹೈರಾಣು..!

First Published Feb 26, 2024, 9:50 AM IST | Last Updated Feb 26, 2024, 9:51 AM IST

ಬೇಸಿಗೆಗಾಲ ಇನ್ನೂ ಮೊದಲ ಚರಣದಲ್ಲಿದೆ, ಆಗಲೇ ಧಗಧಗ ಬಿಸಿಲು ನೆತ್ತಿಯನ್ನೇ ಸುಟ್ಟು ಹಾಕೋ ಹಾಗಿದೆ. ಈಗಲೇ ಹೀಗಾದರೆ ಮುಂದೆ ಹೇಗೆ ಅನ್ನೊ ಚಿಂತೆ ಎಲ್ಲರಿಗೂ ಕಾಡ್ತಿದೆ. ಇದಿನ್ನೂ ಫೆಬ್ರವರಿ ತಿಂಗಳು, ಮಾರ್ಚ್ ಮೊದಲ ವಾರದಿಂದ ಅಧಿಕೃತವಾಗಿ ಆರಂಭವಾಗ ಬೇಕಾಗಿದ್ದ ಬೇಸಿಗೆ(Summer), ಫೆಬ್ರವರಿ 2ನೇ ವಾರದಲ್ಲೇ ಚುರುಕು ಮುಟ್ಟುಸ್ತಾ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ತಾಪಮಾನಕ್ಕಿಂತಲೂ, ಈ ಬಾರಿಯ ತಾಪಮಾನಕ್ಕಿರುವ(Temperature) ವ್ಯತ್ಯಾಸ ಅಜಗಜಾಂತರ. ಸೂರ್ಯ ಇನ್ನಷ್ಟು ಕೆಂಡಕಾರಲಿದ್ದಾನೆ, ಅದು ನಿಸ್ಸಂದೇಹ ಅದಕ್ಕೀಗ ಸೂಚನೆಯೂ ಸಿಕ್ಕಿದ್ದಾಗಿದೆ. ಅದರಲ್ಲೂ ಮೊದಲ ಹಂತ ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ನೀರಿನ(Water) ಕಂಟಕ ಕಾಣಿಸಿಕೊಂಡಿದ್ದು, ಜನರು ಬದುಕುವುದೇ ದುಸ್ತರ ಮಾಡಿ ಹಾಕಿದೆ ಈ ಬರ(Drought). ಅಲ್ಲಿಗೆ ಜನ ನೀರಿಗಾಗಿ ಹಾಹಾಕಾರ ಪಡೋದು ತಪ್ಪಿದ್ದಲ್ಲ. ರಾಜ್ಯದ ಬಹುತೇಕ ಅಣೆಕಟ್ಟುಗಳು. ನದಿ, ಕರೆ, ತೊರೆ, ಹಳ್ಳಕೊಳ್ಳಗೆಲ್ಲವೂ ನೀರಿಲ್ಲದೇ ಬರಿದಾಗುತ್ತ ಹೋಗುತ್ತಿದೆ. ಜಲಮೂಲಗಳೆಲ್ಲ ಹಂತ-ಹಂತವಾಗಿ ಬತ್ತಿ ಹೋಗ್ತಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಿರುವುದರ ಪರಿಣಾಮ, ಕುಡಿಯೋದಕ್ಕೆ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ. ಪ್ರಾಣಿ ಸಂಕುಲಗಳ ಗೋಳಿನ ಕಥೆಯಂತೂ ಕೇಳೋರೇ ಇಲ್ಲ. ಇನ್ನೂ ನೀರಿಲ್ಲದೇ ಜಲಚರಗಳದ್ದು ಮಾರಣ ಹೋಮವೇ ನಡೆದು ಹೋಗ್ತಿದೆ. 

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ಶುಭ ಕಾರ್ಯಗಳಿಗೆ ಉತ್ತಮವಾಗಿದ್ದು, ಅಮ್ಮನವರ ಆರಾಧನೆ ಮಾಡಿ