ಬಿಎಂಟಿಸಿ ಬಸ್ ಹತ್ತಿದ್ದ ಮಹಿಳಾ ಸಿಎಂ! ಕಂಡಕ್ಟರ್- ಪ್ರಯಾಣಿಕರಿಗೆ ಫುಲ್ ಶಾಕ್..!

ಬಿಎಂಟಿಸಿ ಪ್ರಯಾಣಿಕರಿಗೆ ಕಾಮಿಡಿಗೇನೂ ಕೊರತೆ ಇರುವುದಿಲ್ಲ. ಪ್ರಯಾಣಿಕರು-ಕಂಡಕ್ಟರ್ ನಡುವೆ ಆಗಾಗ ಕಾಮಿಡಿ, ಕಿರಿಕ್ ನಡೆಯುವುದು ಕಾಮನ್. ಇಲ್ಲಿಯೂ ಹಾಗೆ ಆಗಿದೆ. ಬಸ್ ಹತ್ತಿದ ಮಹಿಳೆಗೆ ಟಿಕೆಟ್ ತಗೊಳಿ ಅಂದರೆ , ನಾನು ಮುಖ್ಯಮಂತ್ರಿ, ನಾನು ಟಿಕೆಟ್ ತೆಗೆದುಕೊಳ್ಳಲ್ಲ ಎಂದಿದ್ಧಾರೆ. 
 

First Published Dec 17, 2020, 10:31 AM IST | Last Updated Dec 17, 2020, 10:33 AM IST

ಬೆಂಗಳೂರು (ಡಿ. 17): ಬಿಎಂಟಿಸಿ ಪ್ರಯಾಣಿಕರಿಗೆ ಕಾಮಿಡಿಗೇನೂ ಕೊರತೆ ಇರುವುದಿಲ್ಲ. ಪ್ರಯಾಣಿಕರು-ಕಂಡಕ್ಟರ್ ನಡುವೆ ಆಗಾಗ ಕಾಮಿಡಿ, ಕಿರಿಕ್ ನಡೆಯುವುದು ಕಾಮನ್. ಇಲ್ಲಿಯೂ ಹಾಗೆ ಆಗಿದೆ. ಬಸ್ ಹತ್ತಿದ ಮಹಿಳೆಗೆ ಟಿಕೆಟ್ ತಗೊಳಿ ಅಂದರೆ , ನಾನು ಮುಖ್ಯಮಂತ್ರಿ, ನಾನು ಟಿಕೆಟ್ ತೆಗೆದುಕೊಳ್ಳಲ್ಲ ಎಂದಿದ್ಧಾರೆ. 

ಮಾತಲ್ಲೇ ಮನೆ ಕಟ್ಟಿ, ಕೋಟಿ ಕೋಟಿ ಪಂಗನಾಮ ಹಾಕ್ತಿದ್ದ ಈ ಐನಾತಿ ಸ್ವಾಮಿ ; ಎಂಥ ಚಾಲಾಕಿ ನೋಡಿ!

'ನಾನು ಮುಖ್ಯಮಂತ್ರಿ, ನೀವು ನನ್ನ ಬಳಿ ಟಿಕೆಟ್ ಕೇಳೋ ಹಾಗಿಲ್ಲ. ನಾನು ಕೆಳಗಡೆನೂ ಇಳಿಯಲ್ಲ, ಕೆಳಗಡೆ ಯಾಕ್ರಿ ಇಳಿಬೇಕು? ನಮ್ಮ ಬಸ್ ನಮ್ಮ ಅಥಾರಿಟಿಯಲ್ಲಿದೆ. ನೀವು ಟಿಕೆಟ್ ಕೇಳುವ ಹಾಗಿಲ್ಲ. ನಾವು ಹೇಳಿದ ಕಡೆ ಕರೆದುಕೊಂಡು ಹೋಗಬೇಕು ಅಷ್ಟೇ' ಎಂದು ಕಂಡಕ್ಟರ್‌ಗೆ ದಬಾಯಿಸಿದ್ದಾರೆ. 

ಆಯ್ತು ಪಾಸ್ ತೋರಿಸಿ ಎಂದು ಕಂಡಕ್ಟರ್ ಕೇಳಿದ್ರೆ, 'ನಾನು ಪಾಸ್ ತೋರಿಸಲ್ಲ, ನನ್ನ ಬಳಿ ಪಾಸ್ ಇಲ್ಲ. ನಾನೇ ಇದ್ದೆನಲ್ಲ ನಾನೇಕೆ ಪಾಸ್ ತೋರಿಸಬೇಕು, ನಾನು ಹೇಳಿದ ಮೇಲೆ ಮುಗಿತು. ನಾನು ಹೇಳಿದ ಕಡೆ ನೀವು ಕರೆದುಕೊಂಡು ಹೋಗಬೇಕು ಅಷ್ಟೇ' ಎಂದು ಅವಾಜ್ ಹಾಕಿದ್ದಾರೆ. ಈ ಮಹಿಳೆಯ ವಿಡಿಯೋ ವೈರಲ್ ಆಗಿದೆ. 

Video Top Stories