ರಾಸಲೀಲೆ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ FIR?
ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕಾನೂನು ತಜ್ಞರು ಸಲಹೆ| ಕಲ್ಲಳ್ಳಿ ದೂರು ಇಲ್ಲವೆ ವಿಡಿಯೋ ಆಧರಿಸಿ ಜಾರಕಿಹೊಳಿ ವಿರುದ್ಧ ಎಫ್‌ಐಆರ್| ಸಂತ್ರಸ್ಥೆ ದೂರು ನೀಡದಿದ್ರೆ ಕೇಸ್‌ಗಿಲ್ಲ ಮಹತ್ವ|
ಬೆಂಗಳೂರು(ಮಾ.05): ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. ಹೌದು, ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಕಾನೂನು ತಜ್ಞರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಲ್ಲಳ್ಳಿ ದೂರು ಇಲ್ಲವೆ ವಿಡಿಯೋ ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ. ಸಂತ್ರಸ್ಥೆ ದೂರು ನೀಡದಿದ್ರೆ ಕೇಸ್‌ಗಿಲ್ಲ ಮಹತ್ವವಿಲ್ಲ ಎಂದು ಹೇಳಲಾಗುತ್ತಿದೆ.