
Hijab Row: ಹೆಣ್ಣುಮಕ್ಕಳು ಹಿಜಾಬ್ ಹಾಕಿದ್ರೆ ತಪ್ಪೇನು?: HDK ಪ್ರಶ್ನೆ
* ವಿಧಾನಸಭೆಯಲ್ಲೂ ಸದ್ದು ಮಾಡಿದ ಮುಸ್ಲಿಂ ಸಂಘಟನೆಗಳ ಬಂದ್
* ಹೈಕೋರ್ಟ್ ತೀರ್ಪು ಜಾರಿಗೆ ಸಿದ್ಧ ಎಂದ ಸರ್ಕಾರ
* ಕರ್ನಾಟಕ ಬಂದ್ ಮಾಡಿದ್ರೆ ತಪ್ಪೇನು ಎಂದ ಸಿದ್ದು
ಬೆಂಗಳೂರು(ಮಾ.18): ಹಿಜಾಬ್ ತೀರ್ಪಿಗೆ ಮುಸ್ಲಿಮರು ಸೆಡ್ಡು ಹೊಡೆದು ಕರ್ನಾಟಕ ಬಂದ್‌ಗೆ ಕರೆ ನೀಡಿತ್ತು. ಆದರೆ ಬಂದ್ ಕರುನಾಡಿನ ಜನತೆ ಡೋಂಟ್ ಕೇರ್ ಅಂದಿದ್ದಾರೆ.
* ವಿಧಾನಸಭೆಯಲ್ಲೂ ಮುಸ್ಲಿಂ ಸಂಘಟನೆಗಳ ಬಂದ್ ಸದ್ದು ಮಾಡಿದೆ. ಹೈಕೋರ್ಟ್ ತೀರ್ಪು ಜಾರಿಗೆ ಸಿದ್ಧ ಅಂತ ಸರ್ಕಾರ ಹೇಳಿದೆ. ಹೀಗಾಗಿ ಕರ್ನಾಟಕ ಬಂದ್ ಮಾಡಿದ್ರೆ ತಪ್ಪೇನು ಅಂತ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಹಿಜಾಬ್ ಇಲ್ಲದೆ ಪರೀಕ್ಷೆಯಿಂದ ದೂರ ಉಳಿದ ವಿದ್ಯಾರ್ಥಿಗಳು, ಈ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ
* ಹೈಕೋರ್ಟ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ಮಾಡಿದ್ದು ತಪ್ಪು ಅಂತ ಮುಸ್ಲಿಮರ ಬಂದ್ ವಿರುದ್ಧ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಕಿಡಿ ಕಾರಿದ್ದಾರೆ.
* ಹೆಣ್ಣುಮಕ್ಕಳು ಹಿಜಾಬ್ ಹಾಕಿದ್ರೆ ತಪ್ಪೇನು ಅಂತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
* ಮತಾಂತರ ನಿಷೇಧ ಕಾಯ್ದೆಯನ್ನ ವಿರೋಧಿಸುತ್ತೇವೆ, ಬಿಜೆಪಿ ಏನು ಬೇಕೋ ಮಾಡಿಕೊಳ್ಳಲಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲ್ ಹಾಕಿದ್ದಾರೆ.