
ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಬಿಎಲ್ ಸಂತೋಷ್
- ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ: ಸಂತೋಷ್- ಬಂಗಾಳದಲ್ಲಿ ಹಿಂಸಾ ರಾಜಕೀಯ ಇದೆಯೇ ಹೊರತು ಅಭಿವೃದ್ಧಿ ಅಲ್ಲ- ಎಲ್ಲ ಕ್ಷೇತ್ರಗಳಲ್ಲೂ ಗೂಂಡಾಗಿರಿ ಇದೆ, ಹಿಂಸೆ ಬಗ್ಗೆ ಸುಪ್ರೀಂಗೆ ಅರ್ಜಿ
ಬೆಂಗಳೂರು (ಮೇ. 23): ಪಶ್ಚಿಮ ಬಂಗಾಳ ದಲ್ಲಿ ಬರೀ ಹಿಂಸೆಯ ರಾಜಕೀಯ ಮಾತ್ರ ನಡೆಯುತ್ತಿದೆಯೇ ಹೊರತು ಅಭಿವೃದ್ಧಿ ನಡೆಯುತ್ತಿಲ್ಲ. ಅಲ್ಲಿನ ಎಲ್ಲ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಬಿಜೆಪಿ ಪ್ರಶ್ನೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜಗತ್ತಿನ ನಂ 1 ಸ್ಥಾನಕ್ಕೇರಲು ಚೀನಾ ಮಾಡುತ್ತಿರುವ ಪ್ಲ್ಯಾನ್ ಇದು
ಆ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ರಾಜಕೀಯಕರಣಗೊಂಡಿದೆ. ಆರು ಸಾವಿರ ಘಟನೆಗಳಲ್ಲಿ ಕೇವಲ 30 ಘಟನೆಗಳ ಬಗ್ಗೆ ಮಾತ್ರ ಎಫ್‌ಐಆರ್ ದಾಖಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯದ ಅಪರಾಧೀಕರಣ ಆಗಿದೆ. ರೇಷನ್ ಅಂಗಡಿಗೆ, ಪರಿಹಾರದ ಹಣಕ್ಕೆ ಟಿಎಂಸಿ ಪಕ್ಷದವರೇ ಮಾಲೀಕರು. ಈ ಚುನಾವಣೆಯ ಬಳಿಕ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದು ಕೊಲೆ ಆಗಿದೆ. ಇದು ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ನಡೆಯುತ್ತಿರುವ ಅಪರಾಧಗಳು ಎಂದು ಹರಿಹಾಯ್ದಿದ್ದಾರೆ.