Hijab Row: 6 ವಿದ್ಯಾರ್ಥಿನಿಯರಿಗೆ ಜೆಎನ್‌ಯುವರೆಗೂ ಸಂಪರ್ಕ, CFI ನಂಟು, ಏನಿದು ಷಡ್ಯಂತ್ರ.?

ಉಡುಪಿಯ (Udupi) ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಹಿಜಾಬ್‌ಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಸಿಎಫ್‌ಐ (CFI) ಸಂಘಟನೆಯ ಇತರ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ವಿವಾದಿತ ಜೆಎನ್‌ಯುವರೆಗೆ ಸಂಪರ್ಕ ಹೊಂದಿರುವುದು ಅವರ ಟ್ವೀಟರ್‌ ಖಾತೆಯಿಂದ ಬಹಿರಂಗವಾಗಿದೆ. 

Share this Video
  • FB
  • Linkdin
  • Whatsapp

ಉಡುಪಿ (ಫೆ. 11): ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಹಿಜಾಬ್‌ಗೆ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಸಿಎಫ್‌ಐ (CFI) ಸಂಘಟನೆಯ ಇತರ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದು, ವಿವಾದಿತ ಜೆಎನ್‌ಯುವರೆಗೆ ಸಂಪರ್ಕ ಹೊಂದಿರುವುದು ಅವರ ಟ್ವೀಟರ್‌ ಖಾತೆಯಿಂದ ಬಹಿರಂಗವಾಗಿದೆ. ಜೆಎನ್‌ಯುನಲ್ಲಿರುವ ಸಿಎಫ್‌ಐ ತಂಡವೇ ಈ ಹಿಜಾಬ್‌ ಹೈಡ್ರಾಮಾವನ್ನು ನಿರ್ದೇಶಿಸುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದೆ.

Hijab Row: ಕಾಂಗ್ರೆಸ್‌ನಲ್ಲೇ ಭಿನ್ನಾಭಿಪ್ರಾಯ, ಸಾಫ್ಟ್ ಹಿಂದುತ್ವದ ಮೊಎ ಹೋದ್ರಾ ಡಿಕೆಶಿ..?

ಹಿಜಾಬ್‌ ಹೋರಾಟಗಾರ್ತಿಯರು ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಬಾಬ್ರಿ ಮಸೀದಿ-ಶ್ರೀರಾಮ ಮಂದಿರದ ವಿಷಯದಲ್ಲಿ ಸುಪ್ರೀಂ ಕೋರ್ಟಿನ ತೀರ್ಪು, ಮಸೀದಿಗಳಲ್ಲಿ ಆಜಾನ್‌ ನಿಷೇಧದ ವಿರುದ್ಧ ಹೋರಾಟದ ಬಗ್ಗೆ ನಡೆದ ಅಭಿಯಾನದಲ್ಲೂ ಭಾಗಿಯಾಗಿದ್ದರು. ಇನ್ನು ದೆಹಲಿ ದಂಗೆಯ ಆರೋಪಿ ರವೂಫ್‌ ಶರೀಫ್‌ನ ಪರ ಹೋರಾಟಗಳಲ್ಲಿಯೂ ಈ ಹಿಜಾಬ್‌ ವಿದ್ಯಾರ್ಥಿನಿಯರು ಟ್ವೀಟ್‌-ರೀಟ್ವೀಟ್‌ಗಳ ಮೂಲಕ ಭಾಗವಹಿಸಿದ್ದು ಕೂಡ ಬಹಿರಂಗವಾಗಿದೆ.

Related Video