News Hour: ವಕ್ಫ್‌ ಬೋರ್ಡ್‌ಗೆ ಬಿಸಿ ಮುಟ್ಟಿಸಿದ ಹಿಂದೂ ಸಂಘಟನೆಗಳು!

ವಿಜಯಪುರದಲ್ಲಿ 10 ಸಾವಿರ ಎಕರೆ ಭೂಮಿ ತನ್ನದು ಎಂದು ಹೇಳುತ್ತಿರುವ ವಕ್ಫ್‌ ಬೋರ್ಡ್‌ ವಿರುದ್ದ ಆಕ್ರೋಶ ಜೋರಾಗಿದೆ. ಮಂಗಳವಾರ ಬಿಜೆಪಿ ಹಾಗೂ ಹಿಂದು ಪರ ಸಂಘಟನೆಗಳು ಈ ಬಗ್ಗೆ ಪ್ರತಿಭಟನೆ ನಡೆಸಿದವು.

Share this Video
  • FB
  • Linkdin
  • Whatsapp

ಬೆಂಗಳೂರು (ಅ.15): ವಿಜಯಪುರದಲ್ಲಿ ವಕ್ಫ್‌ ಸರ್ವೆ ಜಟಾಪಟಿ ಜೋರಾಗಿದೆ. ವಕ್ಫ್‌ ಸರ್ವೇ ವಿರುದ್ಧ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಮುಗಿಬಿದ್ದಿವೆ. ವಿಜಯಪುರದಲ್ಲಿ 10 ಸಾವಿರ ಎಕರೆ ಭೂಮಿ ತನ್ನದು ಎಂದು ವಕ್ಫ್‌ ಹೇಳುತ್ತಿದೆ.

10 ಸಾವಿರ ಎಕರೆ ತನ್ನ ಭೂಮಿಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಭೂಮಿ ಒತ್ತುವರಿಯಾಗಿದೆ ಎಂದು ವಕ್ಫ್‌ ಹೇಳಿತ್ತು. ಈ ಒತ್ತುವರಿ ಜಮೀನನ್ನು ವಾಪಾಸ್‌ ಪಡೆಯಲು ವಕ್ಫ್‌ ಸಚಿವ ಜಮೀರ್‌ ಅಹ್ಮದ್‌ ಆದೇಶ ನೀಡಿದ್ದರು.

ಜಮೀರ್ ಅಹಮದ್ ಖಾನ್ ಮುತ್ತಜ್ಜನ ಹೆಸರು ಮಲ್ಲಪ್ಪ, ಕಲ್ಲಪ್ಪ ಇರಬಹುದು: ಶಾಸಕ ಯತ್ನಾಳ್!

ಈ ಬಗ್ಗೆ ರೈತರಿಗೆ ನೋಟಿಸ್‌ ಕೂಡ ನೀಡಲಾಗಿತ್ತು. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸರ್ವೆ ಆದೇಶ ಹಿಂಪಡೆಯುವಂತೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ.

Related Video