ಜಮೀರ್ ಅಹಮದ್ ಖಾನ್ ಮುತ್ತಜ್ಜನ ಹೆಸರು ಮಲ್ಲಪ್ಪ, ಕಲ್ಲಪ್ಪ ಇರಬಹುದು: ಶಾಸಕ ಯತ್ನಾಳ್!
ಹಿಂದೂಸ್ಥಾನದಲ್ಲಿ ಇರುವ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮತಾಂತರ ಆದವರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರ (ಅ.15): ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ಹಿಂದೂಸ್ಥಾನದಲ್ಲಿ ಇರುವ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮತಾಂತರ ಆದವರು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ಹಿಂದೂ ಆಸ್ತಿಗಳ ಸಂರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊನ್ನೆ ವಿಜಯಪುರಕ್ಕೆ ಬಂದಿದ್ದ ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಯಾರೆಂಬುದೇ ಅವರಿಗೆ ಗೊತ್ತಿಲ್ಲ. ಆದರೆ, ವಕ್ಫ್ ಬೋರ್ಡ್ ಆಸ್ತಿ ಯತ್ನಾಳ್ ಅವರಪ್ಪನ ಆಸ್ತಿಯಲ್ಲ ಎಂದು ಹೇಳಿದ್ದಾರೆ. ನೀನು ನಮ್ಮಪ್ಪನ ಆಸ್ತಿಯಲ್ಲ. ನಿನ್ನ ಮತ್ತಜ್ಜನ ಹೆಸರು ಮಲ್ಲಪ್ಪ ಅಥವಾ ಕಲ್ಲಪ್ಪ ಇತ್ತೋ ಗೊತ್ತಿಲ್ಲ. ನಿವೇನು ಹಿಂದೂಸ್ಥಾನದಲ್ಲಿ ಇದ್ದೀರಲ್ಲ ಎಲ್ಲ ಮುಸ್ಲಿಮರು ಔರಂಗಜೇಬ, ಟಿಪ್ಪು ಸುಲ್ತಾನ ಹಾಗೂ ಆದಿಲ್ ಶಹಾನ ಖಡ್ಗಕ್ಕೆ ಹೆದರಿಕೊಂಡು ಮುಸ್ಲಿಂ ಆಗಿದ್ದೀರಿ. ನಮ್ಮ ಹಿರಿಯರು ಮುತ್ತಜ್ಜರು ಯಾವುದಕ್ಕೂ ಹೆದರದೇ ಹಿಂದೂಗಳಾಗಿಯೇ ಉಳಿದುಕೊಂಡು ವಿಭೂತಿ ಕುಂಕುಮ ಹಚ್ಚಿಕೊಂಡು ಎಲ್ಲವನ್ನೂ ಎದುರಿಸಿ ಬಂದಿದ್ದಾರೆ. ಅವರು ನಿಜವಾದ ಹಿಂದೂ ಹುಲಿಗಳು. ನಿಮ್ಮಪ್ಪನೇ ಕಂಟ್ರಿ (ದೇಸಿ) ಇದ್ದಾನೆ. ನೀವೇನು ಅರಬ್ ಕಂಟ್ರಿಯವರಿಗೆ ಹುಟ್ಟಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ವಕ್ಫ್ ಭೂಮಿಯನ್ನು ಬಡವರಿಗೆ ಹಂಚಲು ಯತ್ನಾಳ್ ಅಪ್ಪನ ಆಸ್ತಿಯಲ್ಲ: ಜಮೀರ್ ಅಹಮದ್!
ವಿಜಯಪುರದಲ್ಲಿ ಕೆಲವು ಹಂದಿಗಳನ್ನು ನಿನ್ನೆ ಮಾತನಾಡಿದ್ದಾರೆ. ವಿಜಯಪುರವನ್ನು ಸ್ವಚ್ಛ ಮಾಡಲಿಕ್ಕೆ ಕೆಲವು ಹಂದಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಒಂದೊಂದು ದಿನ ಸುದ್ದಿಗೋಷ್ಠಿ ಕರೆದು ನಮ್ಮ ಬಗ್ಗೆ ಮಾತನಾಡಿದ್ದಾರೆ. ನೀವು ನಿಮ್ಮಪ್ಪನಿಗೆ ಖರೆ ಹುಟ್ಟಿದ್ದರೆ ನಿಮ್ಮ ಬಳಿ ಏನೇನು ದಾಖಲೆಗಳಿವೆ ಅವುಗಳನ್ನು ಹೊರಗೆ ತೆಗೆಯಿರಿ. ಜಮೀರ್ ಅಹಮದ್ ವಿಧಾನಸಭೆಯನ್ನು ನನ್ನನ್ನು ಕೇಳಿದರು. ಆಗ ಹಿಂದೂ ಮುಸ್ಲಿಂ ಬಗ್ಗೆ ಮಾತನಾಡಿದ್ದಕ್ಕೆ ಜಮೀರ್ ಅಹಮದ್ ಖಾನ್ ಬಂದು ನಮ್ಮ ಬಗ್ಗೆ ಹೀಗೆಲ್ಲಾ ಮಾತನಾಡಬೇಡಿ ಎಂದು ಹೇಳಿದರು. ಹೌದು, ಮಾತನಾಡಿದ್ದೇನೆ ನೀವು ಏನು ಮಾಡಿಕೊಳ್ತೀರಿ ಎಂದು ಹೇಳಿದೆ. ಇದಾದ ನಂತರ ಜಮೀರ್ ಅಹಮದ್ ಖಾನ್ ವಿಜಯಪುರಕ್ಕೆ ಬಂದು ಮುಂದಿನ ಬಾರಿ ವಿಜಯಪುರದಲ್ಲಿ ಮುಸ್ಲಿಂ ವ್ಯಕ್ತಿಯೇ ಶಾಸಕ ಆಗುತ್ತಾನೆ ಎಂದು ಹೇಳಿದ್ದಾರೆ. ಬೇಕಾದರೆ ಜಮೀರ ಅಹಮದ್ ಖಾನ್ ನೀನೇ ಬಂದು ನನ್ನ ಎದುರಿಗೆ ಸ್ಪರ್ಧೆ ಮಾಡಿ ಗೆಲ್ಲು. ಈಗಾಗಲೇ ಈ ಹಿಂದೆ ಸಿಎಂ ಇಬ್ರಾಹಿಂ ನನ್ನ ಮುಂದೆ ಬಂದು ಕಿಸಿದು ವಾಪಾಸ್ ಹೋಗಿದ್ದಾನೆ ಎಂದು ಹೇಳಿದರು.
ವಿಜಯಪುರದಲ್ಲಿ 11 ಸಾವಿರ ಎಕರೆ ವಕ್ಫ್ ಭೂಮಿ ಇದೆ ಎಂದು ಹೇಳಿದ್ದಾರೆ. ಆದರೆ, ಈ ಭೂಮಿಯ ಪ್ರಮಾಣ 15,924 ಎಕರೆ ಭೂಮಿಗೆ ತಲುಪಿದೆ. ವಕ್ಫ್‌ನಿಂದ ಏನು ಲಾಭ ಆಗಿದೆ. ಮುಸ್ಲಿಮರ ಬಗ್ಗೆ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಭಾರೀ ಕಾಳಜಿ ಇಟ್ಟುಕೊಂಡಿದ್ದಾರೆ. ಐಎಂಎ ಹಗರಣದಲ್ಲಿ ಖರ್ಗೆ ಅವರು ಸಣ್ಣ ಸಣ್ಣ ಮುಸ್ಲಿಮರ ಹಣವನ್ನು ಲೂಟಿ ಮಾಡಿದರು. ಆಗ ಸಿದ್ದರಾಮಯ್ಯಗೆ, ರೋಷನ್ ಬೇಗ್‌ಗೆ ತಲಾ 5 ಕೋಟಿ ರೂ. ಕೊಟ್ಟಿದ್ದಾರೆ. ಇನ್ನು ಇದೇ ಜಮೀರ್ ಅಹಮದ್ ಖಾನ್ ಐಎಂಎ ಹಗರಣದ ವ್ಯಕ್ತಿಯ ಬಳಿ 25 ಕೋಟಿ ರೂ. ಅನಧಿಕೃತವಾಗಿ ಹಾಗೂ 25 ಕೋಟಿ ರೂ. ಸಾಲವಾಗಿ ತೆಗೆದುಕೊಂಡಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದರು.
ಇದನ್ನೂ ಓದಿ: ವಕ್ಫ್ ಭೂಮಿಯನ್ನು ಬಡವರಿಗೆ ಹಂಚಲು ಯತ್ನಾಳ್ ಅಪ್ಪನ ಆಸ್ತಿಯಲ್ಲ: ಜಮೀರ್ ಅಹಮದ್!
ವಿಜಯಪುರದಲ್ಲಿ ವಕ್ಪ ಸರ್ವೆ ವಿಚಾರದ ಬಗ್ಗೆ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ನೋಟಿಸ್ ಬಂದಿವೆ. ಕಾಂಗ್ರೆಸ್ ಶಾಸಕರ ಕ್ಷೇತ್ರದ ರೈತರಿಗೆ ನೋಟಿಸ್ ಬಂದಿವೆ. ವಿಜಯಪುರ ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರು ವಕ್ಫ್ ಸರ್ವೇ ಬಗ್ಗೆ ಮಾತನಾಡುತ್ತಿಲ್ಲ. ಇವರಿಗೆ ಪ್ರಶ್ನಿಸೋ ಧಮ್ ಇಲ್ಲ. ಯಾರೊಬ್ಬರೂ ವಕ್ಫ್ಗೆ ಆಸ್ತಿ ಬಿಟ್ಟುಕೊಡಬೇಡಿ. ಯಾರು ನಿಮಗೆ ತೊಂದ್ರೆ ಕೊಡಲ್ಲ. ನಾನು ಮಾತನಾಡಿದ್ದೇನೆ. ಯಾವ ಅಧಿಕಾರಿಗಳು ಕೂಡ ಎಂಟ್ರಿಕೊಡಲ್ಲ ಹೆದರಬೇಡಿ. ವಿಜಯಪುರದಲ್ಲಿ ಹಿಂದೂಗಳಿಗೆ ಕೈ ಹಚ್ಚಿದರೆ ನಾವು ಸುಮ್ಮನಿರಲ್ಲ. ವಿಜಯಪುರ ಸುತ್ತಮುತ್ತ 800 ಹಳ್ಳಿಗಳಿವೆ ಎಲ್ಲರೂ ಬಂದು ಹೊಕ್ಕು ಬಿಡ್ತೇವೆ. ವಿಜಯಪುರ ನಗರದ ದಲಿತರ ಮನೆಗಳಿಗೆ ವಕ್ಫ್ ನೋಟಿಸ್ ಹೋಗಿವೆ. ಅವರ ಮನೆಗಳಿಗೆ ಕೈ ಹಚಿದ್ರೆ ಸುಮ್ಮನಿರಲ್ಲ. ರಕ್ತಪಾತವಾದರೂ ಸರಿ ನಾವು ವಕ್ಫ್ ಆಸ್ತಿಯನ್ನು ಬಿಟ್ಟುಕೊಡಲ್ಲ ಎಂದು ಓವೈಸಿ ಹೇಳಿದ್ದಾರೆ. ಆದರೆ, ನಮ್ಮ ದೇವರ ಕೈಯ್ಯಲ್ಲಿ ಚಾಕೋಲೆಟ್ ಇಲ್ಲ. ಎಲ್ಲ ಮನೆಗಳಲ್ಲಿಯೂ ಶಸ್ತ್ರಾಸ್ತ್ರ ಸಂಗ್ರಹಿಸಿ ಇಟ್ಟುಕೊಳ್ಳಿ. ನಾವು ಸಹ ರೆಡಿ ಇದ್ದೇವೆ ಎಂದು ಓವೈಸಿ ಮಾತಿಗೆ ಯತ್ನಾಳ್ ತಿರುಗೇಟು ನೀಡಿದರು.