5 ಬಾರಿ ಟೆಕೆಟ್ ಬುಕ್ ಮಾಡಿ ಕ್ಯಾನ್ಸಲ್, 7.5 ಲಕ್ಷ ರೂ ಖರ್ಚು ಮಾಡಿದರೂ ಭಾರತಕ್ಕೆ ಬರ್ಲಿಲ್ಲ ಪ್ರಜ್ವಲ್!
ಜಮರ್ನಿಯಿಂದ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿ 5 ಬಾರಿ ವಿದೇಶದಲ್ಲೇ ಉಳಿದ ಪ್ರಜ್ವಲ್ ರೇವಣ್ಣ, ದೇವಸ್ಥಾನ ಭೇಟಿ ಮುಂದುವರಿಸಿದ ಜಾಮೀನು ಪಡೆದು ಹೊರಬಂದ ಹೆಚ್‌ಡಿ ರೇವಣ್ಣ , ಹೆಚ್‌ಡಿ ಕುಮಾರಸ್ವಾಮಿ ತಿಮಿಂಗಿಲ ಆರೋಪ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ತನಿಖೆ ತೀವ್ರಗೊಂಡಿದೆ. ಇತ್ತ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಬಂಧಿಸಲು ವಿಮಾನ ನಿಲ್ದಾಣದಲ್ಲೇ ಕಾದು ಕುಳಿತು ಸುಸ್ತಾಗಿದ್ದಾರೆ. ಕಾರಣ ಒಂದಲ್ಲ ಎರಡಲ್ಲ, ಬರೋಬ್ಬರಿ 5 ಬಾರಿ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್‌ನಿಂದ ನೇರವಾಗಿ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. 5ನೇ ಬಾರಿಯೂ ಪ್ರಜ್ವಲ್ ರೇವಣ್ಣ ವಿಮಾನದಲ್ಲಿ ಬೆಂಗಳೂರಿಗೆ ಬರಲೇ ಇಲ್ಲ. ಇತ್ತ ಟಿಕೆಟ್ ಕೂಡ ಕ್ಯಾನ್ಸಲ್ ಮಾಡಿಲ್ಲ. ಒಂದ ಟಿಕೆಟ್‌ಗೆ ಕನಿಷ್ಠ 1.5 ಲಕ್ಷ ರೂಪಾಯಿಯಿಂತ ಕೇವಲ ಟಿಕೆಟ್ ಬುಕ್‌ಗಾಗಿ 7.5 ಲಕ್ಷ ರೂಪಾಯಿ ಪ್ರಜ್ವಲ್ ರೇವಣ್ಣ ಖರ್ಚು ಮಾಡಿದ್ದಾರೆ. ಇತ್ತ ಕ್ಯಾನ್ಸಲ್ ಕೂಡ ಮಾಡದೆ ಪ್ರಯಾಣವೂ ಮಾಡದೇ ವಿದೇಶದಲ್ಲೇ ಪ್ರಜ್ವಲ್ ಉಳಿದುಕೊಂಡಿದ್ದಾರೆ.