MLC Election Results: ಗೆದ್ದ ಕುಟುಂಬ..ಸೋತ ಪಕ್ಷ, ಜೆಡಿಎಸ್ ಭವಿಷ್ಯ ಏನು.?

ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಕೇವಲ 2 ಸ್ಥಾನ ಗಳಿಸಿ ಭಾರೀ ಹಿನ್ನಡೆ ಅನುಭವಿಸಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 15): ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ (MLC Elections) ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್ ಕೇವಲ 2 ಸ್ಥಾನ ಗಳಿಸಿ ಭಾರೀ ಹಿನ್ನಡೆ ಅನುಭವಿಸಿದೆ. 

MLC Election Results: ಡಿಕೆಶಿ ಜೊತೆ ಮಹಾಂತೇಶ್ ಕವಟಗಿಮಠ ಮ್ಯಾಚ್ ಫಿಕ್ಸಿಂಗ್, ಲಖನ್ ಬಾಂಬ್

ಚುನಾವಣೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಪರಿಷತ್‌ನಲ್ಲಿ ಜೆಡಿಎಸ್‌ ಒಟ್ಟು 10 ಸದಸ್ಯರನ್ನು ಮಾತ್ರ ಹೊಂದಿದಂತಾಗಿದೆ. ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಇನ್ನು, ಜೆಡಿಎಸ್‌ ಭದ್ರಕೋಟೆಯಾಗಿದ್ದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಕಾಂಗ್ರೆಸ್‌ ತನ್ನದಾಗಿಸಿಕೊಂಡಿದೆ. ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವುದು ಮತ್ತು ಕಣಕ್ಕಿಳಿಸಿದ ಕ್ಷೇತ್ರದಲ್ಲಿ ಅಭ್ಯರ್ಥಿಯ ಪರವಾಗಿ ಸಮರ್ಪಕವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿರುವುದು ಸೋಲಿಗೆ ಕಾರಣ ಎಂದು ವಿಮರ್ಶಿಸಲಾಗಿದೆ.

Related Video