ಅಂಬಿ ಶವದ ಹೆಸರು ಹೇಳಿ ಟಿಕೆಟ್‌ ಮಾರಿದ್ದರು; ಎಚ್‌ಡಿಕೆ ವಿರುದ್ಧ ಸುಮಲತಾ ಗರಂ

- ಅಂಬರೀಷ್‌ ಸಾವನ್ನು ರಾಜಕೀಯಕ್ಕೆ ಬಳಸ್ತೀರಲ್ಲ, ನಿಮ್ಮನ್ನು ಏನಂತ ಕರೆಯಬೇಕು?- ಬೇಕಾದಾಗ ಅಂಬರೀಷ್‌ ಹೆಸರು ಬಳಸಿ ಈಗ ಬಾಯಿಗೆ ಬಂದಂತೆ ಹೇಳುತ್ತೀರಾ?- ಅಂಬರೀಷ್‌ ಅವರಿಂದ ಎಲ್ಲೆಲ್ಲಿ ಲಾಭ ಪಡೆದಿದ್ದೀರಿ ಎಂಬುದನ್ನು ಮರೆಯಬೇಡಿ

Share this Video
  • FB
  • Linkdin
  • Whatsapp

ಬೆಂಗಳೂರು (ಜು. 10): ಕೆಆರ್‌ಎಸ್‌ ಬಿರುಕು ವಿಚಾರವಾಗಿ ಎಚ್‌ಡಿಕೆ- ಸುಮಲತಾ ನಡುವೆ ಶುರುವಾದ ವಾಕ್ಸಮರ, ಅಂಬಿವರೆಗೂ ಬಂದು ನಿಂತಿದೆ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಎಚ್‌ಡಿಕೆ ಅಂಬಿ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಸುಮಲತಾ ಗರಂ ಆಗಿದ್ದಾರೆ.

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ; ಸಿಎಂ, ಗಣಿ ಸಚಿವರ ಭೇಟಿಗೆ ಸುಮಲತಾ ನಿರ್ಧಾರ

'ನಿಮಗೆ ಬೇಕಾದಾಗ ಅಂಬರೀಷ್‌ ಹೆಸರು ಬಳಸಿಕೊಂಡು ಈಗ ಬಾಯಿಗೆ ಬಂದಂತೆ ಮಾತನಾಡುತ್ತೀರಾ? ಅಂಬರೀಷ್‌ ಅವರಿಂದ ಎಲ್ಲೆಲ್ಲಿ ಲಾಭ ಪಡೆದಿದ್ದೀರಿ ಎನ್ನುವುದನ್ನು ನೀವು ಮರೆಯಬೇಡಿ' ಎಂದು ಕಿಡಿಕಾರಿದ್ದಾರೆ. ಚುನಾವಣೆ ಸಮಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ, ಅಂಬರೀಷ್‌ ಶವವನ್ನು ಮಾರುಕಟ್ಟೆಯಲ್ಲಿಟ್ಟು ಟಿಕೆಟ್‌ ಮಾರುವಂತೆ ಮಾಡಿದ್ದರು’ ಎಂದು ಮಂಡ್ಯ ಸಂಸದೆ ಸುಮಲತಾ ಆಪಾದಿಸಿದ್ದಾರೆ. ಇವೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. 

Related Video