ಇಡಿ ವಿಚಾರಣೆಯಲ್ಲಿ ದ್ದದಲ್, ಸದನದಲ್ಲಿ ವಾಲ್ಮೀಕಿ ಹಗರಣದ ಗದ್ದಲ!

ಜು.22ರ ವರೆಗೆ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ,ದದ್ದಲ್ ವಿಚಾರಣೆ ತೀವ್ರ, ಇಡಿ ಬಳಸಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನ, ಕಾಂಗ್ರೆಸ್ ಆರೋಪ, ದರ್ಶನ್ ಸೇರಿ ಇತರ ಆರೋಪಿಗಳ ನ್ಯಾಯಾಂಗ ಬಂಧನ ಆ.1ರವರೆಗೆ ವಿಸ್ತರಣೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಇಡಿ ಬಂಧನದಲ್ಲಿರುವ ಮಾಜಿ ಸಚಿವ ನಾಗೇಂದ್ರ ಅವರನ್ನು ಮತ್ತೆ 5 ದಿನಗಳ ಕಾಲ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಇಡಿ ವಶಕ್ಕೆ ಒಪ್ಪಿಸಲಾಗಿದೆ. ಇಡಿ 8 ದಿನಗಳ ಕಾಲ ವಶಕ್ಕೆ ಪಡೆಯಲು ಮನವಿ ಮಾಡಿದರೆ ಕೋರ್ಟ್ 5 ದಿನಗಳ ಕಾಲ ನೀಡಿದೆ. ಇತ್ತ ವಾಲ್ಮೀಕಿ ಹಗರಣದಲ್ಲಿ ಕೇಳಿಬರುತ್ತಿರುವ ನಿಗದಮ ಅಧ್ಯಕ್ಷ ಬಸನಗೌಡ ದದ್ದಲ್ ಸಂಕಷ್ಟ ಹೆಚ್ಚಾಗಿದೆ. ಇಂದು ದದ್ದಲ್ ಸತತ ಇಡಿ ವಿಚಾರಣೆ ಎದುರಿಸಿದ್ದಾರೆ. ಇದರ ನಡುವೆ ಸದನದಲ್ಲಿ ಇಂದೂ ಕೂಡ ವಾಲ್ಮೀಕಿ ಹಗರಣ ಭಾರಿ ಗದ್ದಲ ಸೃಷ್ಟಿಸಿದೆ. ಬಿಜೆಪಿ ಹಗರಣ ಮುಂದಿಟ್ಟು ಆಡಳಿತ ಪಕ್ಷ ಕಾಂಗ್ರೆಸ್ ವಿರದ್ದ ಹರಿಹಾಯ್ದಿದ್ದರೆ, ಇತ್ತ ಕಾಂಗ್ರೆಸ್ ಪ್ರತಿ ದಾಳಿ ನಡೆಸಿದೆ.

Add Asianetnews Kannada as a Preferred SourcegooglePreferred

Related Video