Asianet Suvarna News Asianet Suvarna News

2 ಅಡಿ ಎತ್ತರದ ಮಣ್ಣಿನ ಮೂರ್ತಿ ನಿರ್ಮಿಸಿ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಪ್ಪು ಅಭಿಮಾನಿ!

- ಮಣ್ಣಿನಲ್ಲಿ ಪುನೀತ್ ಮೂರ್ತಿ ನಿರ್ಮಿಸಿ ನಟನಿಗೆ ಕಂಬನಿ

- ಪುನೀತ್ ನೆನಪಿಗಾಗಿ ಎರಡು ಅಡಿ ಎತ್ತರದ ಮಣ್ಣಿನ ಮೂರ್ತಿ

- ಸಹಾಯಕ ಪ್ರಾಧ್ಯಾಪಕನಾಗಿರುವ ಅಭಿನಂದನ್ ಬಾಂದೇಕರ್

 

ಕಾರವಾರ (ನ. 13): ಪುನೀತ್ ಅಭಿಮಾನಿಯೊಬ್ಬರು (Puneeth Rajkumar) ಮಣ್ಣಿನಲ್ಲಿ ಪುನೀತ್ ಮೂರ್ತಿ ತಯಾರಿಸಿ ತನ್ನ ಮೆಚ್ಚಿನ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

 ವೃತ್ತಿಯಲ್ಲಿ ಕಾರವಾರದ (Karwar) ಗಿರಿಜಾಬಾಯಿ ಸೈಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಸಿವಿಎಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿರುವ ಅಭಿನಂದನ್ ಬಾಂದೇಕರ್ ತನ್ನ 5ನೇ ತರಗತಿಯಿಂದಲೂ ಪುನೀತ್ ರಾಜ್ ಕುಮಾರ್ ಅವರ ನಟನೆ, ಡ್ಯಾನ್ಸಿಂಗ್ ಅಭಿಮಾನಿ. ನಂದನಗದ್ದಾ ನಿವಾಸಿ ಕಲಾವಿದ ರಾಮ್ ಬಾಂದೇಕರ್ ಅವರ ಪುತ್ರನಾಗಿರುವ ಅಭಿನಂದನ್, ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಚಿತ್ರ ಕಲೆ, ಮೂರ್ತಿ ನಿರ್ಮಾಣದ ಕಲೆಯೊಂದಿಗೆ ಈವೆಂಟ್ ಮ್ಯಾನೇಜ್‌ಮೆಂಟ್ ಕೂಡಾ ನಡೆಸುತ್ತಿದ್ದಾರೆ. 

ಬೆಟ್ಟದಷ್ಟು ಪ್ರೀತಿ, ಅಪಾರ ಅಕ್ಕರೆ, ನನ್ನ ತಮ್ಮ ನನ್ನ ಹೆಮ್ಮೆ ಎಂದ ಶಿವಣ್ಣ

ಯಾವುದೇ ಕಾರ್ಯಕ್ರಮದಲ್ಲಿ ತನಗೆ ಹಾಡೋಕೆ ಅವಕಾಶ ಸಿಕ್ಕರೆ ಅಲ್ಲಿ ಪುನೀತ್ ರಾಜ್‌ಕುಮಾರ್ ಅವರ ಹಾಡು ಹಾಡ್ತಾರೆ. ಪುನೀತ್ ರಾಜ್ ಕುಮಾರ್ ಅವರ ಎರಡು ಅಡಿ ಎತ್ತರದ ಮಣ್ಣಿನ ಮೂರ್ತಿಯನ್ನು ನಿರ್ಮಾಣ. ಮೂರು ದಿನಗಳಲ್ಲಿ ನಿರ್ಮಾಣ ಮಾಡಿರುವ ಈ ಮೂರ್ತಿಗೆ ಅತ್ಯುತ್ತಮ ಬಣ್ಣ ಬಳಿದು ತಮ್ಮ‌ ಮನೆಯಲ್ಲಿರಿಸಿದ್ದು, ವಿವಿಧೆಡೆಯಿಂದ ಜನರು ಬಂದು ಈ  ಮೂರ್ತಿ ನೋಡಿ ತೆರಳುತ್ತಿದ್ದಾರೆ. 

Video Top Stories