ಬೆಟ್ಟದಷ್ಟು ಪ್ರೀತಿ, ಅಪಾರ ಅಕ್ಕರೆ, ನನ್ನ ತಮ್ಮ ನನ್ನ ಹೆಮ್ಮೆ ಎಂದ ಶಿವಣ್ಣ

ಪ್ರೀತಿಯ ತಮ್ಮ, ಸ್ನೇಹಿತನಂತಿದ್ದ ಅಪ್ಪುವನ್ನು ಕಳೆದುಕೊಂಡು ಶಿವಣ್ಣ ನೋವಿನಲ್ಲಿದ್ದಾರೆ. ಅಪ್ಪು ಜೊತೆಗಿನ ಒಡನಾಡ, ಬಾಂಧವ್ಯ, ವ್ಯಕ್ತಿತ್ವದ ಬಗ್ಗೆ  ಶಿವಣ್ಣ ಮಾತು. 

Share this Video
  • FB
  • Linkdin
  • Whatsapp

ಪುನೀತ್ ರಾಜ್‌ಕುಮಾರ್ (Puneeth rajkumar) ಅಕಾಲಿಕ ಮರಣ ಇಡೀ ರಾಜ್ಯವನ್ನೇ ದುಃಖದಲ್ಲಿ, ನೋವಲ್ಲಿ ಮುಳುಗಿಸಿತು. ಎಲ್ಲರಿಂದ ಪ್ರೀತಿಯಿಂದ ಕರೆಸಿಕೊಳ್ಳುವ 'ಅಪ್ಪು' ಇನ್ನಿಲ್ಲ ಎಂದರೆ ಯಾರಿಗೂ ಒಪ್ಪಿಕೊಳ್ಳಲಾಗುತ್ತಿಲ್ಲ. ಅಂತದ್ರಲ್ಲಿ ಪ್ರೀತಿಯ ಅಣ್ಣ ಶಿವಣ್ಣ, ಪತ್ನಿ ಅಶ್ವಿನಿ, ಪುತ್ರಿಯರಿಗೆ ಹೇಗಾಗಿರಬೇಡ..? ಅವರಿನ್ನೂ ಆಘಾತದಿಂದ ಹೊರಬಂದಿಲ್ಲ. ಅಂದು ನಡೆದಿದ್ದೇನು ಎಂದು ಶಿವಣ್ಣ ವಿವರಿಸುತ್ತಾ, ನಿಂತ ನೆಲವೇ ಕುಸಿದಂತಾಗಿತ್ತು. ಏನಾಗ್ತಾ ಇದೆ ಅಂತಲೇ ಗೊತ್ತಾಗ್ತ ಇರಲಿಲ್ಲ ಎಂದರು. ಅಪ್ಪು ಜೊತೆಗಿನ ಒಡನಾಟ, ಪ್ರೀತಿ, ವ್ಯಕ್ತಿತ್ವದ ಬಗ್ಗೆ ಶಿವಣ್ಣ (Shivarajkumar) ಮಾತು. 

Related Video