ಅನಧಿಕೃತ ಖಾಸಗಿ ಶಾಲೆಗಳಿಗೆ ಸದ್ಯದ್ರಲ್ಲೇ ಬೀಳುತ್ತೆ ಬೀಗ: ಆ.14ರೊಳಗೆ ಮುಚ್ಚುವಂತೆ ಖಡಕ್ ಆದೇಶ !

ರಾಜ್ಯಾದ್ಯಂತ ನಾಯಿಕೊಡೆಗಳಂತೆ ಅನಧಿಕೃತ ಶಾಲೆಗಳು ತಲೆಎತ್ತುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಠಿಯಿಂದ ಶಿಕ್ಷಣ ಇಲಾಖೆ ಎಚ್ಚೆತ್ತಿದೆ. ಅನಧಿಕೃತ ಶಾಲೆಗೆಳಿಗೆ ಆಗಸ್ಟ್ 14ರೊಳಗೆ ಬೀಗ ಜಡಿಯುವಂತೆ ಸೂಚನೆ ನೀಡಲಾಗಿದೆ. 
 

First Published Aug 11, 2023, 12:00 PM IST | Last Updated Aug 11, 2023, 12:00 PM IST

ಬೆಂಗಳೂರು ಸೇರಿದಂತೆ ರಾಜ್ಯದ ಅನಧಿಕೃತ ಖಾಸಗಿ ಶಾಲೆಗಳ ಮೇಲೆ ಕೊನೆಗೂ ಸರ್ಕಾರ ಚಾಟಿ ಬೀಸಿದೆ. ಹಿಂದಿನ ಸರ್ಕಾರ ಅನಧಿಕೃತ ಶಾಲೆಗಳನ್ನ(private schools) ಪಟ್ಟಿ ಮಾಡಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ(Congress government) ಬರುತ್ತಿದ್ದಂತೆ ಅನಧಿಕೃತ ಶಾಲೆಗಳು ಮತ್ತೆ ಮುನ್ನಲೆಗೆ ಬಂದಿದೆ‌. ಇದೀಗ ಅನಧಿಕೃತ ಶಾಲೆಗಳಿಗೆ ಆಗಸ್ಟ್ 14ರ ಒಳಗೆ ಬೀಗ ಜಡಿಯುವಂತೆ ಶಿಕ್ಷಣ ಇಲಾಖೆ(Education Department) ಬಿಇಒ ಹಾಗೂ ಡಿಡಿಪಿಐಗಳಿಗೆ ಸೂಚನೆ ಕೊಟ್ಟಿದೆ. ಅನಧಿಕೃತವಾಗಿ ಸಿಬಿಎಸ್‌ಸಿ ಪಠ್ಯ ಬೋಧನೆ, ಅನಧಿಕೃತ ತರಗತಿ, ನೋಂದಣಿ ಪಡೆಯದ ಶಾಲೆಗಳನ್ನ ಮುಚ್ಚಿಸುವಂತೆ ಸೂಚನೆ ಕೊಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯೇ 1,300 ಶಾಲೆಗಳಿಗೆ ಸಂಬಂಧ ಪಟ್ಟ ದಾಖಲೆಗಳನ್ನ ನೀಡುವಂತೆ ನೋಟಿಸ್(Notice) ನೀಡಲಾಗಿತ್ತು. ಸರ್ಕಾರ ಕೊಟ್ಟ ಗಡುವಿನ ಮಧ್ಯೆ ದಾಖಲೆಗಳು ಒದಗಿಸದ ಹಿನ್ನೆಲೆಯಲ್ಲಿ ಈ ಶಾಲೆಗಳಿಗೆ ಬೀಗ ಜಡಿಯಲು ಸಿದ್ಥತೆ ನಡೆದಿದೆ. ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾಸಗಿ ಶಾಲೆಗಳ ಒಕ್ಕೂಟಗಳೊಂದಿಗೆ ಸಭೆ ನಡೆಸಲಿದ್ದಾರೆ. ರುಪ್ಸಾ, ಕ್ಯಾಮ್ಸ್, ಕುಸುಮ ಸೇರಿದಂತೆ ಖಾಸಗಿ ಶಾಲೆ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಾಲಾ ನೋಂದಣಿ ನವೀಕರಣ, ಪಠ್ಯ ಪುಸ್ತಕ ಕೊರತೆ, ಆರ್.ಟಿ.ಇ.ಮರು ಜಾರಿ ಕುರಿತಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ:  ಕರುನಾಡಲ್ಲಿ ಜೋರಾಗಿದೆ ಮದ್ರಾಸ್ ಐ ಆರ್ಭಟ: ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಕೇಸ್ ದಾಖಲು