ಉಡುಪಿ ವಿಡಿಯೋಕಾಂಡ, 11 ದಿನಗಳ ಬಳಿಕ ಆರೋಪಿ ವಿದ್ಯಾರ್ಥಿನಿಯರ ವಿಚಾರಣೆ!

ಉಡುಪಿಯ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿಗಳ ವಿಡಿಯೋ ಮಾಡಿದ್ದಾರೆ ಎನ್ನಲಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರಣೆ ನಡೆಸಲಾಗಿದೆ. ಮಲ್ಪ ಪೊಲೀಸರು ಶುಕ್ರವಾರ ಇವರ ವಿಚಾರಣೆ ನಡೆಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.29): ನೇತ್ರಜ್ಯೋತಿ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದಾರೆ ಎನ್ನಲಾದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಮಲ್ಪೆ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಇದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಘಟನೆ ನಡೆದು 11 ದಿನಗಳ ಬಳಿಕ ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದಾರೆ. 

ಉಡುಪಿ ವಿಡಿಯೋಕಾಂಡ, ತನಿಖಾಧಿಕಾರಿಯ ಬದಲಿಸಿದ ಎಸ್‌ಪಿ!

ಶುಕ್ರವಾರ ರಾತ್ರಿ ಅಜ್ಞಾತ ಸ್ಥಳದಲ್ಲಿ ಈ ಮೂವರು ವಿದ್ಯಾರ್ಥಿನಿಯರ ವಿಚಾರಣೆ ನಡೆಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಾಗಿ ಮೂರು ದಿನಗಳಾದರೂ ವಿದ್ಯಾರ್ಥಿನಿಯರಿಗೆ ವಿಚಾರಣೆ ಹಾಜರಾಗುವಂತೆ ಕನಿಷ್ಠ ನೋಟಿಸ್‌ ಕೂಡ ನೀಡಲಾಗಿರಲಿಲ್ಲ ಎನ್ನುವ ಆರೋಪ ಪೊಲೀಸರ ಮೇಲೆ ಬಂದಿತ್ತು.

Related Video