Asianet Suvarna News Asianet Suvarna News

ಉಡುಪಿ ವಿಡಿಯೋಕಾಂಡ, ತನಿಖಾಧಿಕಾರಿಯ ಬದಲಿಸಿದ ಎಸ್‌ಪಿ!

ಉಡುಪಿ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಉಡುಪಿ ಎಸ್‌ಪಿ ಅಕ್ಷಯ್‌ ಪ್ರಕರಣದಲ್ಲಿ ತನಿಖಾಧಿಕಾರಿಯನ್ನು ಬದಲಿಸಿದ್ದಾರೆ. ಕುಂದಾಪುರದ ಡಿವೈಎಸ್‌ಪಿ ಬೆಳ್ಳಿಯಪ್ಪ ಇನ್ನು ಈ ಪ್ರಕರಣದ ತನಿಖೆ ಮಾಡಲಿದ್ದಾರೆ.
 

ಬೆಂಗಳೂರು (ಜು.29): ಉಡುಪಿ ಕಾಲೇಜಿನ ವಾಶ್‌ರೂಮ್‌ನಲ್ಲಿ ವಿಡಿಯೋ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಹೊಸ ತನಿಖಾಧಿಕಾರಿಯನ್ನು ಉಡುಪಿ ಎಸ್‌ಪಿ ಅಕ್ಷಯ್‌ ಹಾಕೇ ಮಚ್ಚಿಂದ್ರ ನೇಮಿಸಿದ್ದಾರೆ. 

ಕುಂದಾಪುರದ ಡಿವೈಎಸ್‌ಪಿಯಾಗಿ ಕಾರ್ಯನಿವರ್ಹಿಸುತ್ತಿರುವ ಬೆಳ್ಳಿಯಪ್ಪ ಇದರ ವಿಚಾರಣೆ ನಡೆಸಲಿದ್ದಾರೆ ಎಂದು ಎಸ್‌ಪಿ ಅಕ್ಷಯ್‌ ಶನಿವಾರ ತಿಳಿಸಿದ್ದಾರೆ.

ಬಿಜೆಪಿಯವರು ಹೆಣದ ಮೇಲೆ ರಾಜಕೀಯ ಮಾಡ್ತಾರೆ: ಸಿಎಂ ಸಿದ್ದರಾಮಯ್ಯ

ಪ್ರಕರಣದ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಬೇಡಿಕೆಯಂತೆ ಎಸ್‌ಪಿ ಮಂಜುನಾಥ್ ಗೌಡ ಅವರ ಸ್ಥಾನಕ್ಕೆ ಬೆಳ್ಳಿಯಪ್ಪ ಅವರನ್ನು ನೂತನ ತನಿಖಾಧಿಕಾರಿಯನ್ನಾಗಿ ನೇಮಿಸಿದರು.