ಜೀವರಕ್ಷಕ ಔಷಧಗಳನ್ನು ನೀಡಿ ಸೋಂಕಿತರ ನೆರವಿಗೆ ಧಾವಿಸಿದ ಮಸಾಲಾ ಜಯರಾಮ್

- ಸೋಂಕಿತರ ನೆರವಿಗೆ ಶಾಸಕ ಮಸಾಲಾ ಜಯರಾಮ್

- ಸರ್ಕಾರಿ ಆಸ್ಪತ್ರೆಗೆ ಜೀವ ರಕ್ಷಕ ಔಷಧಗಳನ್ನು ನೀಡಿದ್ದಾರೆ

- ಅಗತ್ಯ ಬಿದ್ರೆ ಇನ್ನೂ ಸಹಾಯ ಮಾಡುವುದಾಗಿ ಭರವಸೆ

First Published May 13, 2021, 4:34 PM IST | Last Updated May 13, 2021, 4:34 PM IST

ತುಮಕೂರು (ಮೇ. 13): ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ರೋಗಿಗಳಿಗೆ ತುಂಬಾ ಅಗತ್ಯ ಇರುವ 11 ಲಕ್ಷ ರೂ ವೆಚ್ಚದಲ್ಲಿ ಜೀವರಕ್ಷಕ ಔಷಧಗಳನ್ನು ಶಾಸಕ ಮಸಾಲಾ ಜಯರಾಮ್ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದರು. ತುರುವೆಕೆರೆ ಜನತೆಗೆ ಇನ್ನೂ ಅಗತ್ಯ ಬಿದ್ದರೆ, ನಾವು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕೋವಿಡ್‌ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.