
50 ಬಸ್ ಮಾಲೀಕ ಮನೆಯಲ್ಲೇ ಮರ್ಡರ್, ನಂಬಿದವರಿಂದಲೇ ಚೂರಿ
ಅವರೆಲ್ಲಾ ಅವನನ್ನ ಬಾಸ್ ಅಂತ ಕರೆದವರೇ.. ಒಬ್ಬ ರೈಟ್ ಹ್ಯಾಂಡ್ ಆದ್ರೆ, ಮತ್ತೆ ಹಲವರ ಸುತ್ತ ಮುತ್ತಾ ಇದ್ದರು. ಮಾಲೀಕ ಜೊತೆಗಿದ್ದವರೇ ಮುಹೂರ್ತ ಫಿಕ್ಸ್ ಮಾಡಿ ಕತೆ ಮುಗಿಸಿಬಿಟ್ಟಿದ್ದರು.
50 ಮಾಲೀಕ ಆತ, ದುಬೈನಲ್ಲೂ ಬ್ಯುಸಿನೆಸ್ ಮಾಡುತ್ತಿದ್ದ. ನೂರಾರು ಮಂದಿ ಅವನ ಬಳಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹೆಂಡತಿ ಮಕ್ಕಳು.. ಇನ್ನೇನು ಬೇಕು ಒಬ್ಬ ಮನುಷ್ಯನಿಗೆ.. ಆದ್ರೆ ಇತ್ತಿಚೆಗೆ ತನ್ನ ಎಲ್ಲಾ ಬಸ್ಗಳನ್ನೂ ಮಾರಿ ದುಬೈಗೆ ಪರ್ಮನೆಂಟಾಗಿ ಶಿಫ್ಟ್ ಆಗೋ ಯೋಚನೆ ಮಾಡಿದ್ದ.. ಆದ್ರೆ ಆವತ್ತೊಂದು ದಿನ ಮಡಿಕೇರಿ ಟ್ರಿಪ್ ಮುಗಿಸಿ ತನ್ನ ಐಷರಾಮಿ ಕಾಟೇಜ್ಗೆ ಬಂದ.. ಆದ್ರೆ ಮನೆಯೊಳಗೆ ಎಂಟ್ರಿಯಾಗ್ತಿದ್ದಂತೆ ಅವನದ್ದೇ ಹುಡುಗರು ಹೊಡೆದು ಹಾಕಿದ್ರು.