150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು

ಮೂರು ತಿಂಗಳ ಹಿಂದೆ ಟೊಮ್ಯಾಟೊ ಅಂದರೆ ಬಂಗಾರದ ಬೆಳೆ ಆಗಿತ್ತು. ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆ ಇದ್ದರೆ ಸಾಕು ಲಕ್ಷಾಧಿಪತಿ ಎನ್ನುತ್ತಿದ್ದರು. ಆದರೆ ಈಗ ಟೊಮ್ಯಾಟೋ ದರ ಧಿಡೀರ್ ಕುಸಿತ ಆಗಿದೆ. ಭರಪೂರ ಇಳುವರಿ ಬಂದಿರುವ ರೈತ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. 
 

First Published Sep 22, 2023, 12:46 PM IST | Last Updated Sep 22, 2023, 12:46 PM IST

ರೈತರ ಪರಿಸ್ಥಿತಿ ಒಂದು ರೀತಿ ಲಾಟರಿ ಖರೀದಿಸಿದ ಹಾಗೆ ಆಗಿದೆ. ಬೀದರ್‌(Bidar) ಜಿಲ್ಲೆಯಲ್ಲಿ ರೈತನ ಪರಿಸ್ಥಿತಿ ಅದೇ ಆಗಿದೆ. ಟೊಮ್ಯಾಟೊಗೆ(Tomato) ಭರ್ಜರಿ ಬೆಲೆ ಸಿಗುತ್ತಿದೆ ಎಂದು 3 ತಿಂಗಳ ಹಿಂದೆ 5 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 3 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಬೆಳೆದಿದ್ದ. ಆದ್ರೆ, ಟೊಮ್ಯಾಟೋಗೆ ಇವತ್ತು ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಟೊಮ್ಯಾಟೊ ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದ್ರೂ ಕಟಾವು ಮಾಡಲು ಕೂಲಿಗೆ ಹಾಕಿದ ಹಣ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಡ್ಡಿಗೆ 5 ಲಕ್ಷದವೆಗೂ ಸಾಲ ತಂದು 3 ಎಕರೆ ಜಮೀನನಲ್ಲಿ ಟೊಮ್ಯಾಟೊ ಬೆಳೆದಿದ್ದ. ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದ ರೈತ(Farmer) ವೈಜನಾಥ್ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದೂವರೆ ತಿಂಗಳ ಹಿಂದೆ 120 ರಿಂದ 150 ಕೆಜಿ ಇದ್ದ ಟೊಮ್ಯಾಟೊ ಈಗ ಕೇವಲ 20 ರಿಂದ 25 ರೂ. ಕೆಜಿಗೆ ಇಳಿದಿದೆ. ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ, ರೈತನಿಗೆ ಒಮ್ಮೆ ಅತಿವೃಷ್ಠಿ-ಮತ್ತೊಮ್ಮೆ ಅನಾವೃಷ್ಠಿ ಸ್ಥಿತಿ ದೆವ್ವ-ಭೂತಗಳಂತೆ ಕಾಡುತ್ತಿರುತ್ತವೆ. 

ಇದನ್ನೂ ವೀಕ್ಷಿಸಿ:  ಸಿಸಿಬಿ ವಿಚಾರಣೆಯಲ್ಲಿ ಚೈತ್ರಾ ಹೇಳಿದ್ದೇನು..? ಇದೀಗ ಯೂ ಟರ್ನ್ ಹೊಡೆದಿದ್ದೇಕೆ ?