Asianet Suvarna News Asianet Suvarna News

ರಾಜ್ಯದ ಮೂರು ಮಕ್ಕಳಿಗೆ ಶೌರ್ಯ ಪ್ರಶಸ್ತಿ: ಧೈರ್ಯ ಮೆರೆದ ಬಾಲಕರಿಗೆ ಮೆಚ್ಚುಗೆ

ರಾಜ್ಯದ ಮೂರು ಮಕ್ಕಳು ಕೇಂದ್ರ ಸರ್ಕಾರದ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಭಾರತೀಯ ಬಾಲ ಕಲ್ಯಾಣ ಸಮಿತಿಯು ಇಂದು ಪ್ರಶಸ್ತಿ ಪ್ರದಾನ ಮಾಡಲಿದೆ.

ಕರ್ನಾಟಕದ ಮೂರು ಮಕ್ಕಳು ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಕಿ ಗಿರಣಿಯಿಂದ ತಾಯಿಯನ್ನು ರಕ್ಷಿಸಿದ್ದ 8 ವರ್ಷದ ದೀಕ್ಷಿತ್‌, ಕಾರು ಆಕ್ಸಿಡೆಂಟ್‌'ನಲ್ಲಿ ಹೆತ್ತವರನ್ನು ಕಾಪಾಡಿದ್ದ ಕೀರ್ತಿ ವಿವೇಕ್‌ ಸಾಹುಕಾರ್‌ ಹಾಗೂ ಶಿರಸಿಯ ಮೂರೆಗಾರ್‌ ಫಾಲ್ಸ್‌'ನಲ್ಲಿ ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ್ದ ಆದಿತ್ಯ ಪ್ರಶಸ್ತಿ ಪಡೆಯಲಿದ್ದಾರೆ. ಪೋಷಕರು ಹಾಗೂ ಸಾರ್ವಜನಿಕರನ್ನು ರಕ್ಷಿಸಿದ್ದ ಬಾಲಕರಿಗೆ ಪ್ರಶಸ್ತಿ ಸಿಗಲಿದೆ. ಮಕ್ಕಳ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.