Asianet Suvarna News Asianet Suvarna News

ಹಿಂದೂ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ತಂತ್ರ: ಕೇಸರಿ ಪಾಳೆಯಕ್ಕೆ ಟಕ್ಕರ್ ನೀಡಲು ಪ್ಲಾನ್

ರಾಜ್ಯದಲ್ಲಿ ವಿಧಾನಸಭಾ ಅಖಾಡ ಸಿದ್ಧವಾಗಿದ್ದು, ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಕಾಂಗ್ರೆಸ್‌ ಪಡೆಯಿಂದ ರಣ ತಂತ್ರ ರೂಪಿಸಲಾಗಿದೆ.

ಬಿಜೆಪಿಗೆ ಟಕ್ಕರ್‌ ನೀಡಲು ಕಾಂಗ್ರೆಸ್ ಪಕ್ಷದಿಂದ ಹಿಂದೂ ಅಸ್ತ್ರ ಪ್ರಯೋಗಿಸಿದ್ದು, ಗೆಲುವೊಂದೇ ಮಾನದಂಡ ಸೂತ್ರದಡಿ ಕಾಂಗ್ರೆಸ್‌ ಪ್ಲಾನ್‌ ಮಾಡಿದೆ. ಹಿಂದುತ್ವದ ಅಜೆಂಡಾ ಪ್ರಯೋಗವಾಗಿರುವ ಜಿಲ್ಲೆಗಳ ಮೇಲೆ ಕೈಪಡೆ ಕಣ್ಣು ಇಟ್ಟಿದ್ದು, ದಕ್ಷಿಣ ಕನ್ನಡ ಉಡುಪಿ, ಉತ್ತರ ಕನ್ನಡ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳತ್ತ ಕಾಂಗ್ರೆಸ್‌ ಚಿತ್ತ ಹರಿಸಿದೆ. ಹಿಂದುತ್ವ ಅಜೆಂಡಾ ಜಾರಿ ಬಗ್ಗೆ ಇಂದು ಕಾಂಗ್ರೆಸ್ ಮಹತ್ವದ ಸಭೆ ನಡೆಸಲಿದ್ದು, ಮಾಜಿ ಸಂಸದರು , ಶಾಸಕರು,ಮಾಜಿ ಶಾಸಕರು ಜಿಲ್ಲಾಧ್ಯಕ್ಷರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕರಾವಳಿ ಕರ್ನಾಟಕ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಹೊಸ ತಂತ್ರ ಹೆಣೆಯಲು ಪ್ಲಾನ್ ನಡೆಸಲಾಗಿದೆ.
 

Video Top Stories