ರಸ್ತೆ ಇಲ್ಲದೇ ರೋಗಿಯನ್ನು 4 ಕಿ.ಮೀ ಜೋಲಿಯಲ್ಲೇ ಹೊತ್ತೊಯ್ದ ಕಳಸ ಗ್ರಾಮಸ್ಥರು!
ಸರಿಯಾದ ರಸ್ತೆ ಇಲ್ಲದೆ, ಅಂಬ್ಯುಲೆನ್ಸ್ ಬಾರದ ಪರಿಣಾಮ ಗ್ರಾಮಸ್ಥರೇ ಜೋಳಿಗೆ ಕಟ್ಟಿಅನಾರೋಗ್ಯ ಪೀಡಿತ ಶೇಷಮ್ಮ ಎಂಬ ವೃದ್ಧೆಯನ್ನು 3 ಕಿ.ಮೀ.ವರೆಗೂ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಕಳಸದ ಕಳ್ಕೋಡು ಗ್ರಾಮದಲ್ಲಿ ಜರುಗಿದೆ.
ಚಿಕ್ಕಮಗಳೂರು (ಜು.13): ಸರಿಯಾದ ರಸ್ತೆ ಇಲ್ಲದೆ, ಅಂಬ್ಯುಲೆನ್ಸ್ ಬಾರದ ಪರಿಣಾಮ ಗ್ರಾಮಸ್ಥರೇ ಜೋಳಿಗೆ ಕಟ್ಟಿಅನಾರೋಗ್ಯ ಪೀಡಿತ ಶೇಷಮ್ಮ ಎಂಬ ವೃದ್ಧೆಯನ್ನು 3 ಕಿ.ಮೀ.ವರೆಗೂ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಕಳಸದ ಕಳ್ಕೋಡು ಗ್ರಾಮದಲ್ಲಿ ಜರುಗಿದೆ. ಹತ್ತಾರು ಬಾರಿ ರಸ್ತೆ ನಿರ್ಮಿಸಲು ಗ್ರಾಮಸ್ಥರು ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಕಲ್ಕೋಡು ಗ್ರಾಮದ ಶೇಷಮ್ಮ (70) ಎಂಬುವವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ವಾಹನ ವ್ಯವಸ್ಥೆ ಇಲ್ಲದೆ ಅವರ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡೇ ಕಾಡಿನ ದಾರಿಯಲ್ಲಿ ಒಂದು ಕಿಮೀ ಹೊತ್ತು ಕೊಂಡು ಸಾಗಿ ಕಳಸ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳಸ ತಾಲೂಕಿನ ಕಳ್ಕೊಡು, ಈಚಲುಹೊಳೆ ಎಂಬಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಇವರಿಗೆ ಸಂಚಾರಕ್ಕೆ ಯೋಗ್ಯವಾದ ರಸ್ತೆಮಾರ್ಗವೇ ಇಲ್ಲ. ಗ್ರಾಮಸ್ಥರು ತಮ್ಮ ಸಮಸ್ಯೆ ಪರಿಹಾರಕ್ಕೆ ಹಿಂದೆ ಹತ್ತಾರು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕಿವಿಗೊಡದ ಜಿಲ್ಲಾಡಳಿತ, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.