ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ. 

Share this Video
  • FB
  • Linkdin
  • Whatsapp

ಚಿತ್ರದುರ್ಗ (ಜೂ. 29): ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ. 

ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ, ಉಪನ್ಯಾಸಕರಿಗೆ ಲಕ್ಷ ಲಕ್ಷ ಹಣ ಬಿಡುಗಡೆ..!

ಸಂಬಳವಿಲ್ಲದೇ ಒಂದೊತ್ತಿನ ಊಟ ಹಾಗೂ ಮೆಡಿಸಿನ್ ಖರೀದಿಸಲು ಕೂಡ ಪರದಾಡುವಂತಾಗಿದ್ದೂ, ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಚಿತ್ರದುರ್ಗದ ಅವಿನಾಶ್ ಎಂಬ ಶಿಕ್ಷಕ ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡ್ತಿದ್ದಾರೆ. ಆದ್ರೆ ಅದರಿಂದಲೂ ಸಹ ಜೀವನ ಸಾಗಿಸೋದು ಕಷ್ಟಕರವಾಗಿದೆ. ಹೀಗಾಗಿ ಸರ್ಕಾರ, ಕುಲಕಸುಬು ಮಾಡುವಂತ ಕಾರ್ಮಿಕರು ಹಾಗು ಆಟೋ ಚಾಲಕರಿಗೆ ನೀಡಿದ ಮಾದರಿಯಲ್ಲೇ‌ ನಮಗೂ ಲಾಕ್ ಡೌನ್ ಗೌರವ ಧನ ನೀಡಬೇಕೆಂಬ ಒತ್ತಾಯ ಖಾಸಗಿ ಶಾಲಾ‌ ಶಿಕ್ಷಕರಿಂದ ಕೇಳಿಬಂದಿದೆ.

Related Video