ನೇಮಕಾತಿ ಹಗರಣ: ತಾರಕಕ್ಕೇರಿದ ಕಾಂಗ್ರೆಸ್‌ ಬಿಜೆಪಿ ನಾಯಕರ ವಾಕ್ಸಮರ..!

*  ಯಾರೇ ಭಾಗಿಯಾಗಿದ್ರೂ ಯೂನಿಫಾರ್ಮ್‌ ಬಿಚ್ಚಿಸಿ ಜೈಲಿಗೆ ಹಾಕ್ತೇವೆ 
*  ಅಧಿಕಾರ ಹಿಡಿಯಲು ಕಾಂಗ್ರೆಸ್‌ ಆತುರ ಪಡುತ್ತಿದೆ
*  ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದೆ ಅಂತ ಕೈ ನಾಯಕರ ವಿರುದ್ಧ ಕಿಡಿ ಕಾರಿದ ವಿಜಯೇಂದ್ರ 
 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ.05): ಸಚಿವ ಅಶ್ವತ್ಥ್‌ ನಾರಾಯಣ ಇಲಾಖೆಯಲ್ಲೂ ಅಕ್ರಮ ನಡೆದಿದೆ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
* ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವತ್ಥ್‌ ನಾರಾಯಣ ವಿರುದ್ಧ ಬಿಜೆಪಿಯಲ್ಲೇ ಷಡ್ಯಂತ್ರ ನಡೆದಿದೆ ಅಂತ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

News Hour ಬೊಮ್ಮಾಯಿ ಸರ್ಕಾರದ ಸರ್ವೇ ರಿಪೋರ್ಟ್, ಹೈಕಮಾಂಡ್‌ನಿಂದ ಬಂತು ಖಡಕ್ ಸೂಚನೆ!

* ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ರಾಮನಗರಲ್ಲಿ ಅಕ್ರಮ ಅಗಿರುವುದು ಸ್ಪಷ್ಟವಾಗಿದೆ ಅಂತ ಹೇಳಿದ್ದಾರೆ.
* ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಯಾರೇ ಭಾಗಿಯಾಗಿದ್ರೂ ಯೂನಿಫಾರ್ಮ್‌ ಬಿಚ್ಚಿಸಿ ಜೈಲಿಗೆ ಹಾಕ್ತೇವೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಖಡಕ್‌ ಆಗಿ ವಾರ್ನಿಂಗ್ ಮಾಡಿದ್ದಾರೆ.
* ಅಧಿಕಾರ ಹಿಡಿಯಲು ಕಾಂಗ್ರೆಸ್‌ ಆತುರ ಪಡುತ್ತಿದೆ. ದಾಖಲೆಗಳಿಲ್ಲದೆ ಆರೋಪಗಳನ್ನ ಮಾಡುತ್ತಿದೆ ಅಂತ ಕೈ ನಾಯಕರ ವಿರುದ್ಧ ಬಿ.ವೈ. ವಿಜಯೇಂದ್ರ ಅವರು ಕಿಡಿ ಕಾರಿದ್ದಾರೆ. 

Related Video