ಸಿಎಂ ಬಿಎಸ್‌ವೈ ಕುರ್ಚಿ ಭದ್ರವಾಗಿರೋದರ ಹಿಂದಿನ ಶಕ್ತಿ ಇವರೇನಾ..?
ಒಂದು ಕಡೆ ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಕೂಗು, ಇನ್ನೊಂದೆಡೆ ಕುರ್ಚಿ ಇನ್ನೆರಡು ವರ್ಷ ಭದ್ರವಾಗಿರಲಿದೆ ಎಂದು ಹೈಕಮಾಂಡ್‌ನಿಂದ ಸಂದೇಶ ಎರಡೂ ವಿಚಾರ ಚರ್ಚೆಯಲ್ಲಿದೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಬಿದ್ದಿದೆ.
ಬೆಂಗಳೂರು (ಜೂ. 15): ಒಂದು ಕಡೆ ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಕೂಗು, ಇನ್ನೊಂದೆಡೆ ಕುರ್ಚಿ ಇನ್ನೆರಡು ವರ್ಷ ಭದ್ರವಾಗಿರಲಿದೆ ಎಂದು ಹೈಕಮಾಂಡ್‌ನಿಂದ ಸಂದೇಶ ಎರಡೂ ವಿಚಾರ ಚರ್ಚೆಯಲ್ಲಿದೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಬಿದ್ದಿದೆ.
ಹೈಕಮಾಂಡ್ ಶ್ರೀರಕ್ಷೆ ಭಿನ್ನಮತರ ಅಸಮಾಧಾನ; ಸಿಎಂ ವಿರುದ್ಧ ಸ್ಫೋಟಗೊಳ್ಳುತ್ತಾ ಬಂಡಾಯ..?
ಕೆಲ ಸಚಿವರು ಹಾಗೂ ಶಾಸಕರು ಪದೇ ಪದೇ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡಿದ್ದರಿಂದ ಅಂತಿಮವಾಗಿ ಎಲ್ಲ ಸಚಿವರು-ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿ ಉಸ್ತುವಾರಿ ಅರುಣ್ ಸಿಂಗ್ ಜೂ. 16 ಕ್ಕೆ ರಾಜ್ಯಕ್ಕೆ ಬರಲಿದ್ದಾರೆ. ಈ ಮೂರು ದಿನಗಳ ಸಭೆ ಬಳಿಕ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.