
ಕೆಲಸ ಆಗ್ಬೇಕು ಅಂದ್ರೆ ಕೈ ಬಿಸಿ ಮಾಡ್ಬೇಕು, ಲಕ್ಷಗಳಲ್ಲಿ ಡೀಲ್ ಮಾಡ್ತಾರೆ ಬಿಬಿಎಂಪಿ ಎಂಜಿನೀಯರ್‌ಗಳು!
ಪ್ರತಿ ಬಾರಿ ಬೆಂಗಳೂರಿನಲ್ಲಿ ಮಳೆ ಬಂದಾಗಲೂ ರಾಜಕಾಲುವೆ ತುಂಬಿ ಹರಿಯುತ್ತದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಇದಕ್ಕೊಂದು ಪರಿಹಾರ ಕಂಡು ಹಿಡಿಯಬೇಕೆಂದು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು.
ಬೆಂಗಳೂರು (ನ. 07): ಪ್ರತಿ ಬಾರಿ ಬೆಂಗಳೂರಿನಲ್ಲಿ ಮಳೆ ಬಂದಾಗಲೂ ರಾಜಕಾಲುವೆ ತುಂಬಿ ಹರಿಯುತ್ತದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಇದಕ್ಕೆಲ್ಲಾ ಬಿಬಿಎಂಪಿ ಅಧಿಕಾರಿಗಳನ್ನು ಬೈದು ಸುಮ್ಮನಾಗುತ್ತೇವೆ. ಮತ್ತೆ ಮಳೆ ಬಂದಾಗ ಮತ್ತಿದೇ ಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೊಂದು ಪರಿಹಾರ ಕಂಡು ಹಿಡಿಯಬೇಕೆಂದು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು.
KAS ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ನೋಟು, ರಾಶಿ ಚಿನ್ನ: ದಾಳಿ ನಡೆಸಿದ ಅಧಿಕಾರಿಗಳು ಸುಸ್ತು!
ಲಂಚಕೋರ ಅಧಿಕಾರಿಗಳ ಬೆನ್ನು ಹತ್ತಿತು. ಬಿಬಿಎಂಪಿಯಲ್ಲಿ ಕೆಲಸ ಮಾಡುವ ಇಂಜೀನಿಯರ್‌ಗಳ ಬಗ್ಗೆ ಕಾರ್ಯಾಚರಣೆ ನಡೆಸಿದಾಗ ಅವರ ಲಂಚಬಾಕತನ ಬಯಲಾಗಿದೆ. ಯಾವುದೇ ಒಂದು ಸಣ್ಣ ಫೈಲ್ ಮೇಜಿನಿಂದ ಮೇಜಿಗೆ ಹೋಗಬೇಕು ಅಂದ್ರೆ ಲಂಚ ಕೊಡಲೇಬೇಕು. ಇದು ಒಂದು ಸರ್ಕಾರಿ ಕಚೇರಿಯ ಕಥೆಯಲ್ಲ, ಬಹುತೇಕ ಕಚೇರಿಯ ಕಥೆ. ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ಹೇಗಿದೆ ಲಂಚಾವತಾರ? ನೋಡೋಣ ಬನ್ನಿ..!