
News Hour: ಮೈಕ್ರೋಫೈನಾನ್ಸ್ ಕಿರುಕುಳ; ಸುವರ್ಣ ನ್ಯೂಸ್ ಅಭಿಯಾನಕ್ಕೆ ಜಯ
ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಯಲು ಸರ್ಕಾರ ಮುಂದಾಗಿದೆ. ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ಜಾರಿಗೆ ಬರಲಿದೆ.
ಬೆಂಗಳೂರು (ಜ.25): ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಿಯಾನಕ್ಕೆ ದೊಡ್ಡ ಜಯ ಸಿಕ್ಕಿದೆ. ಮೈಕ್ರೋ ಫೈನಾನ್ಸ್ ಧನದಾಹಕ್ಕೆ ಸರ್ಕಾರ ಮೂಗುದಾರ ಹಾಕುವ ನಿರ್ಧಾರ ಮಾಡಿದೆ. ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ಎಂದು ಸಿಎಂ ಅಭಯ ನೀಡಿದ್ದಾರೆ.
ಸಾಲ ವಸೂಲಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್‌ಗಳಿಗೆ ಅಂಕುಶ ಹಾಕುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಕೆಲವು ಸೂಚನೆಗಳನ್ನು ನೀಡಿದ್ದಾರೆ.
News Hour: ಹೈಕಮಾಂಡ್ ಅಂಗಳಕ್ಕೆ ಬಳ್ಳಾರಿ ಬೇಗುದಿ
ಇನ್ನೊಂದೆಡೆ, ಆಸ್ತಿ ವ್ಯವಹಾರವೇ ದೋಸ್ತಿಗಳ ಸಂಬಂಧಕ್ಕೆ ಕೊಳ್ಳಿ ಇಟ್ಟಿತಾ ಎನ್ನುವ ಅನುಮಾನ ಶುರುವಾಗಿದೆ. ರೆಡ್ಡಿ, ರಾಮುಲು ಬಳಿಕ ಬೆಂಬಲಿಗರ ನಡುವೆ ವಾಗ್ಯುದ್ಧ ಆರಂಭವಾಗಿದೆ. ಪಕ್ಷದಲ್ಲಿ ಎಲ್ಲವೂ ಸರಿಇಲ್ಲ ಎಂದು ಡಿವಿಎಸ್ ಮತ್ತೆ ಗುಟುರು ಹಾಕಿದ್ದಾರೆ.