ಅನಂತವಾದರು ಶತಮಾನದ ಸಂತ: ಪಟ್ಟ ಬೇಡ.. ಪದ್ಮಶ್ರಿಯೂ ಬೇಡ ಅಂದಿದ್ದ ಸಿದ್ದೇಶ್ವರ ಶ್ರೀ!

ಮೋದಿ ಸರ್ಕಾರ ನೀಡೋಕೆ ಮುಂದಾಗಿದ್ದ ಪದ್ಮಶ್ರೀ ಪ್ರಶಸ್ತಿ ಬೇಡವೆಂದ ಸಿದ್ದಪ್ಪಾಜಿ  ಪ್ರಧಾನಿ ಮೋದಿ ಅವರನ್ನ ಮೆಚ್ಚಿದ್ದೇಕೆ.? ರಾಜಕಾರಣಿಗಳು ಹತ್ತಿರ ಬಂದರು. ರಾಜಕೀಯದಿಂದ ದೂರವೇ ಉಳಿದು ಅಚ್ಚರಿ ಅನಿಸಿಕೊಂಡಿದ್ದು ಹೇಗೆ ಶ್ರೀಗಳು?

Share this Video
  • FB
  • Linkdin
  • Whatsapp

ಮೋದಿ ಸರ್ಕಾರ ನೀಡೋಕೆ ಮುಂದಾಗಿದ್ದ ಪದ್ಮಶ್ರೀ ಪ್ರಶಸ್ತಿ ಬೇಡವೆಂದ ಸಿದ್ದಪ್ಪಾಜಿ ಪ್ರಧಾನಿ ಮೋದಿ ಅವರನ್ನ ಮೆಚ್ಚಿದ್ದೇಕೆ.? ರಾಜಕಾರಣಿಗಳು ಹತ್ತಿರ ಬಂದರು. ರಾಜಕೀಯದಿಂದ ದೂರವೇ ಉಳಿದು ಅಚ್ಚರಿ ಅನಿಸಿಕೊಂಡಿದ್ದು ಹೇಗೆ ಶ್ರೀಗಳು? ಅವರ ಬದುಕೇ ಬೋಧನೆ. ಇನ್ನು ಸಾವಿನಲ್ಲೂ ಸಂದೇಶ ನಮಗೆಲ್ಲಾ ಮಹತ್ತಾದ ಸಂದೇಶ ಕೊಟ್ಟಿದ್ದಾರೆ. ಅದೇನು? ಪುಣ್ಯಾತ್ಮರ ಅನಂತ ಮಹಿಮೆ ಎಂಥದ್ದು? ಇದೆಲ್ಲವನ್ನೂ ಹೇಳೋದೇ ಇವತ್ತಿನ ಸುವರ್ಣ ಫೋಕಸ್, ಮೋದಿಯ ಮೆಚ್ಚಿದ ಮಹಾಸಂತ. ಯಾವುದಕ್ಕೂ ಅಂಟಿಕೊಳ್ಳದ ಸ್ವಾಮೀಜಿ. ಯಾರೊಬ್ಬರನ್ನೂ ಹಚ್ಚಿಕೊಳ್ಳದ ಸ್ವಾಮೀಜಿ, ಮೋದಿಯವರ ಬಗ್ಗೆ ಏನ್ ಹೇಳಿದ್ರು ಅನ್ನೋದನ್ನ ಕೇಳಿದ್ರೆ ನಿಮಗೆ ಅಚ್ಚರಿಯಾಗ್ಬೋದು. ಸಿದ್ದಪ್ಪಾಜಿ ಅವರು ಲಕ್ಷಾಂತರ ಭಕ್ತರ ಪಾಲಿಗೆ ಸಾಕ್ಷಾತ್ ಭಗವಂತನೇ. ಅವರ ಮಾತು ಅಂದ್ರೆ ಅದು ದೈವವಾಣಿ. ಇವರ ದರ್ಶನಕ್ಕೆ ಸಾಮಾನ್ಯ ಜನರಷ್ಟೇ ಅಲ್ಲ, ಘಟಾನುಘಟಿ ವಿಐಪಿಗಳೂ ಸಹ ಮುಗಿಬಿದ್ದು ಬರ್ತಿದ್ರು. ಆದ್ರೆ, ಶ್ರೀಗಳು ಅವರನ್ನ ಹೇಗೆ ನೊಡ್ಕೊಳ್ತಿದ್ರು ಗೊತ್ತಾ..? ಮೋದಿ ಅವರ ಬಗ್ಗೆ ಸ್ವಾಮೀಜಿ ಮಾತಾಡಿದ್ರು. ಆದ್ರೆ ಮೋದಿ ಅವರು ಪ್ರಧಾನಿ ಅಂತ ಮಾತಾಡಿದ್ದಲ್ಲ. ಹಾಗಾದ್ರೆ, ಶ್ರೀಗಳ ಇಂಗಿತ ಏನಿತ್ತು? ಸಿದ್ದೇಶ್ವರ ಶ್ರೀಗಳು ಜಾತಿಗೆ ಸೀಮಿತವಾದವರಲ್ಲ. ಅದನ್ನೂ ಮೀರಿದವರು. ಮನುಕುಲಕ್ಕೇ ಗುರುಗಳಾದವರು. ಅಂಥಾ ಶ್ರೀಗಳ ಬಗ್ಗೆ ಮತ್ತಷ್ಟು ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

Related Video