Asianet Suvarna News Asianet Suvarna News

ಕೆಂಪಣ್ಣ ಭ್ರಷ್ಟಾಚಾರ ಆರೋಪಕ್ಕೆ ಸುಧಾಕರ್‌ ತಿರುಗೇಟು

ಸಚಿವ ಕೆ.ಸುಧಾಕರ್ ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸುಧಾಕರ್ ತಿರುಗೇಟು ನೀಡಿದ್ದು, ಕೆಂಪಣ್ಣ ಕಾಂಗ್ರೆಸ್ ಏಜೆಂಟ್, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

First Published Apr 13, 2022, 7:52 PM IST | Last Updated Apr 13, 2022, 7:52 PM IST

ಬೆಂಗಳೂರು (ಏ.13): ಆರೋಗ್ಯ ಸಚಿವ ಡಾ. ಕೆ.ಸುಧಾಕರ್ (Health Minister Dr.K.Sudhakar ) ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ (Contractors Association President Kempanna) ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಸುಧಾಕರ್ ಕೂಡ  ತಿರುಗೇಟು ನೀಡಿದ್ದಾರೆ. ಕೆಂಪಣ್ಣ ಪುರಾವೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್. ಅವರನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಬೇಕು ಎಂದು ಸುಧಾಕರ್ ಹೇಳಿದ್ದಾರೆ.

ಪ್ರಸ್ತುತ ಸರ್ಕಾರದಲ್ಲಿ ಟೆಂಡರ್ ಗೆ ಶೇ. 5ರಷ್ಟು ಕಮೀಷನ್ ನೀಡದೇ ಇದ್ರೆ ಟೆಂಡರ್ ಗೆ ಒಪ್ಪಿಗೆ ನೀಡಲ್ಲ. ಪ್ರಸ್ತುತ 2 ಸಾವಿರ ಕೋಟಿ ಕಾಮಗಾರಿ ನಡೀತಾ ಇದೆ. ಒಂದು ಟೆಂಡರ್ ಗೆ ಶೇ. 5ರಷ್ಟು ಕಮೀಷನ್ ನೀಡ್ಬೇಕು. ನೀರಾವರಿ ಇಲಾಖೆಯಲ್ಲಿ ಕಂಡುಕೇಳರಿಯದ ಭ್ರಷ್ಟಾಚಾರವಿದೆ. ಸುಧಾಕರ್ ಸಾಹೇಬ್ರು ಕೂಡ ಇದ್ದಾರೆ. ಈಶ್ವರಪ್ಪನವರ ಬಂಡವಾಳ ಏನು ಅಂತಾ ಈಗಾಗಲೇ ಗೊತ್ತಾಗಿದೆ. ಆದ್ದರಿಂದ ಹೋರಾಟ ಅನಿವಾರ್ಯವಾಗಿದ್ದು, ನಮ್ಮ ಕೆಲಸಗಳನ್ನ ನಿಲ್ಲಿಸಲು ತೀರ್ಮಾನಿಸಿದ್ದೇವೆ ಎಂದು ಕೆಂಪಣ್ಣ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

Suicide Case: ಈಶ್ವರಪ್ಪನವರೇ ಮೊದಲು ರಾಜೀನಾಮೆ ನೀಡಿ: ಹೆಚ್.ಡಿ.ಕುಮಾರಸ್ವಾಮಿ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಕೆಂಪಣ್ಣ ಪುರಾವೆ ಇಲ್ಲದೆ ಏನೇನೋ ಮಾತಾಡಿದ್ದಾರೆ. ಇವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಬ್ಲ್ಯಾಕ್ ಲಿಸ್ಟ್ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡುತ್ತೇನೆ. ನಾನು ವೈಯಕ್ತಿಕವಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಇವರನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.