Asianet Suvarna News Asianet Suvarna News

Suicide Case: ಈಶ್ವರಪ್ಪನವರೇ ಮೊದಲು ರಾಜೀನಾಮೆ ನೀಡಿ: ಹೆಚ್.ಡಿ.ಕುಮಾರಸ್ವಾಮಿ

ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್‌ರವರ ಸಾವಿನ ಪ್ರಕರಣದಲ್ಲಿ ಸಾಕಷ್ಟು ಸಂಶಯಗಳಿವೆ. ಇದರಲ್ಲಿ ಕಾಣದ ಕೈಗಳ ವ್ಯವಸ್ಥಿತವಾದ ಸಂಚಿದೆ. ಸಿಎಂ ಬಸವರಾಜ್ ಬೊಮ್ಮಾಯಿಯವರೇ ಮೊದಲು ಈಶ್ವರಪ್ಪನವರ ರಾಜೀನಾಮೆ ಪಡೆಯಿರಿ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಒತ್ತಾಯಿಸಿದರು. 

jds leader hd kumaraswamy react about santhosh patils suicide case in Davanagere gvd
Author
Bangalore, First Published Apr 13, 2022, 6:01 PM IST | Last Updated Apr 13, 2022, 6:01 PM IST

ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಏ.13): ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್‌ರವರ (Santhosh Patil) ಸಾವಿನ ಪ್ರಕರಣದಲ್ಲಿ (Suicide Case) ಸಾಕಷ್ಟು ಸಂಶಯಗಳಿವೆ. ಇದರಲ್ಲಿ ಕಾಣದ ಕೈಗಳ ವ್ಯವಸ್ಥಿತವಾದ ಸಂಚಿದೆ. ಸಿಎಂ ಬಸವರಾಜ ಬೊಮ್ಮಾಯಿಯವರೇ (CM Basavaraj Bommai) ಮೊದಲು ಈಶ್ವರಪ್ಪನವರ (KS Eshwarappa) ರಾಜೀನಾಮೆ (Resignation) ಪಡೆಯಿರಿ ತನಿಖೆ ನಡೆಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಒತ್ತಾಯಿಸಿದರು. 

ದಾವಣಗೆರೆ (Davanagere) ಜಿಲ್ಲೆಯ ಹರಿಹರ ಬನ್ನಿಕೋಡು ಗ್ರಾಮದಲ್ಲಿ ಮಾತನಾಡಿ ಅವರು ಈ ಪ್ರಕರಣದಲ್ಲಿ ನಾನು ಯಾರಿಗೂ ಸರ್ಟಿಫಿಕೇಟ್ ಕೊಡುವುದಿಲ್ಲ. ಇದರಲ್ಲಿ ಸರ್ಕಾರದ (Government) ತಪ್ಪು, ತನಿಖೆ ನಡೆಸಿ ಈ ಪ್ರಕರಣದ ಹಿಂದೆ ಇರುವ ಸತ್ಯಸತ್ಯೆ ಹೊರಬರಲಿದೆ. ಇನ್ನು ಈಶ್ವರಪ್ಪನವರು ಹಟಕ್ಕೆ ಬಿಳದೇ ರಾಜೀನಾಮೆ ಕೊಡುವುದು ಸೂಕ್ತ, ರಾಜೀನಾಮೆ ಕೊಟ್ಟ ನಂತರ ಇವರ ಪಾತ್ರದ ಬಗ್ಗೆ ಅವರೇ ಸಾಬೀತುಪಡಿಸಬೇಕು, ಬಿಜೆಪಿ ಪಕ್ಷದ ಜವಾಬ್ಧಾರಿ ಇದೆ, ಈಗಾಗಲೇ 40% ಪರ್ಸೆಂಟೇಜ್ ಬಗ್ಗೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್‌ನವರಿಗು ಗೊತ್ತು ಎಂದರು.

Karnataka Politics: ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ, ತೊಂದರೆ ಕೊಡಬಾರದು: ಎಚ್‌.ಡಿ. ಕುಮಾರಸ್ವಾಮಿ

ಕೆಲಸ ಮಾಡೋಕೆ ಬಿಟ್ಟವರಾರು: ನಾಲ್ಕು ಕೋಟಿ ಕೆಲಸವನ್ನು  ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡೋಕೆ ಬಿಟ್ಟವರಾರು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ವರ್ಕ್ ಆರ್ಡರ್ ಪರ್ಮಿಶನ್ ಕೊಟ್ಟವರು ಯಾರು ಎಂಬುದು ಕೂಡ  ತನಿಖೆಯಾಗಬೇಕು. ಇನ್ನು ನಿನ್ನೆ ಉಡುಪಿಗೆ ಹೋದಾಗ ಇವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದರು. ಅವರು ಹೋಗಿದ್ದು ಮೇಲ್ನೋಟಕ್ಕೆ ಸಂಶಯಕ್ಕೆ ಎಡೆ ಮಾಡಿದೆ. ಈಶ್ವರಪ್ಪ ರಾಜೀನಾಮೆ ಕೊಡುವುದು ಅನಿವಾರ್ಯ. ಸರ್ಕಾರ ಯುವಕನ ಸಾವಿಗೆ ಕಾರಣವೇನು ಎಂಬುದು ಹಾಗು ವಾಸ್ತವಾಂಶ ಏನಿದೆ ಎಂಬುದು ಸತ್ಯಾಂಶ ಹೊರಬರದಿದ್ದರೆ ಬಿಜೆಪಿ ಸರ್ಕಾರಕ್ಕೂ ಕಷ್ಟ ಎಂದರು. 

ಕಾಂಗ್ರೆಸ್‌ನವರು ಮಲಗಿದ್ದವರು ಎದ್ದಿದ್ದಾರೆ: ಈಶ್ವರಪ್ಪನವರು ಮೊದಲು ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕಾಂಗ್ರೆಸ್‌ನವರು ಮಲಗಿದ್ದವರು ಎದ್ದಿದ್ದಾರೆ. ನನಗೆ ಒಂದು ಸಂಶಯ ಇದೆ. ಪ್ರಕರಣ ನಡೆದು ಅರ್ಧ ಮುಕ್ಕಾಲು ಗಂಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಕರೆ‌ ನೀಡಿದೆ, ರಾಜ್ಯಾದಂತ್ಯ ಕೈ ಕಾರ್ಯಕರ್ತರು ಮುಗಿಬೀಳುತ್ತಿದ್ದಾರೆ. ಇನ್ನು ಈ  40 ಪರ್ಸೆಂಟೇಜ್ ಬಗ್ಗೆ ಮೂರು ತಿಂಗಳ ಹಿಂದೆ ನಮಗೆ ಗೊತ್ತಾಗಿತ್ತು. ಇದರ ಬಗ್ಗೆ ಸಿದ್ದರಾಮಯ್ಯ ‌ಡಿಕೆಶಿ ಶಿವಕುಮಾರ್‌ ಅವರಿಗು ಗೊತ್ತು ಎಂದು ಕಾಂಗ್ರೆಸ್ ಮುಖಂಡರಿಗೆ ಕುಮಾರಸ್ವಾಮಿ ಟಾಂಗ್ ನೀಡಿದ‌ರು. 

Karnataka Politics: ನನ್ನ ಮೌನದಿಂದ ಸಿದ್ದು, ಎಚ್‌ಡಿಕೆಗೆ ತೊಂದರೆ: ಬೊಮ್ಮಾಯಿ

ನರೇಂದ್ರ ಮೋದಿ ತಾನು ತಿನ್ನಲ್ಲ ಬೇರೆಯವರಿಗೂ ಬಿಡೋಲ್ಲ ಎಂದಿದ್ದರು: ನರೇಂದ್ರ ಮೋದಿಯ (PM Narendra Modi) ತಾನು ತಿನ್ನಲ್ಲ ಬೇರೆಯವರಿಗು ಬಿಡೋಲ್ಲ ಎಂದಿದ್ದರು, ಅದನ್ನು ಅವರು ಸಾಬೀತು ಪಡಿಸಬೇಕಿದೆ, ಪರ್ಸೆಂಟೇಜ್ ಬಗ್ಗೆ ನರೇಂದ್ರ ಮೋದಿಯವರಿಗು ಪತ್ರ ಬರೆದಿದ್ದಾನೆ ಎಂದು ಮಾಹಿತಿ ಇದೆ. ಪರ್ಸೆಂಟೇಜ್ ಸತ್ಯ ಹೊರಬರಬೇಕಿದೆ. ಒಂಭತ್ತನೇ ತಾರೀಖು ಈ ವ್ಯಕ್ತಿ ಇಂಟರ್‌ವ್ಯೂ ಕೊಟ್ಟಿರುವುದು ಈಶ್ಚರಪ್ಪ ನಾನು ಕೊಟ್ಟಿಲ್ಲ ಎಂದು ಹೇಳಿದ್ದಾನೆ. ಉತ್ತಮ ಪೊಲೀಸ್ ಅಧಿಕಾರಿಗಳನ್ನು ಹಾಕಿ ವಾಸ್ತವಾಂಶ ತನಿಖೆ ಮಾಡಿಸಬೇಕು ಎಂದರು.

Latest Videos
Follow Us:
Download App:
  • android
  • ios