Asianet Suvarna News Asianet Suvarna News

'ಕಿಡ್ನಾಪ್‌ ಆಗಿಲ್ಲ, ನಾನೇ ಓಡಿಬಂದಿದ್ದೇನೆ..' ಸುಬ್ರಮಣ್ಯದಿಂದ ನಾಪತ್ತೆಯಾದ ಮಹಿಳೆಯ ವಿಡಿಯೋ ವೈರಲ್ !

ಸುಬ್ರಮಣ್ಯದಿಂದ ಕಿಡ್ನಾಪ್‌ ಆಗಿದ್ದಾರೆ ಎಂದು ಹೇಳಲಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಭಾರತಿ ಅವರದ್ದು ಎನ್ನಲಾಗಿರುವ ವಿಡಿಯೋ ವೈರಲ್‌ ಆಗಿದ್ದು, ಇದರಲ್ಲಿ ತನ್ನನ್ನು ಯಾರೂ ಕಿಡ್ನಾಪ್‌ ಮಾಡಿದ್ದ. ಸ್ವ ಇಚ್ಛೆಯಿಂದ ಓಡಿ ಬಂದಿದ್ದೇನೆ ಎಂದು ಹೇಳಿದ್ದಾರೆ.
 

ಸುಬ್ರಹ್ಮಣ್ಯ (ನ.23): ನನ್ನನ್ನು ಯಾರೂ ಅಪಹರಿಸಿಲ್ಲ, ಪ್ರೀತಿಸಿದವರೊಂದಿಗೆ ನಾನೇ ಸ್ವಯಂ ಇಚ್ಛೆಯಿಂದ ಹೋಗಿದ್ದೇನೆ ಎಂದು  ಸುಬ್ರಮಣ್ಯದಿಂದ ನಾಪತ್ತೆಯಾದ ಗ್ರಾ.ಪಂ.ಸದಸ್ಯೆ ಭಾರತಿ ಹೇಳಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಒಬ್ಬರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದ್ರು. ನಾವು ಕಳೆದ 5 ವರ್ಷಗಳಿಂದ ಲವ್ ಮಾಡ್ತಾ ಇದ್ದೆವೆ. ಈಗಲೂ ಮಾಡ್ತಾ ಇದ್ದೇವೆ. ಮದುವೆಗೆ ಮುಂಚೆನೂ ಲವ್ ಮಾಡ್ತಿದ್ದೆ.

Belthangady: ವಿಷಪೂರಿತ ಅಣಬೆ ಅಡುಗೆ ಸೇವನೆ: ಕುಟುಂಬದ ಇಬ್ಬರ ಸಾವು

ಇದರಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ. ಯಾರ ಹತ್ತಿರವೂ ಕೇಳುವುದೂ ಬೇಡ. ನಮಗೆ ತೊಂದರೆ ಕೊಡಬೇಡಿ. ಹಾಗೇನಾದ್ರೂ ಮಾಡಿದ್ರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ಖುಷಿಯಾಗಿಯೇ ಇದ್ದೇನೆ.  ಆಮೇಲೆ ಏನಾದ್ರೂ ಆದರೆ ನೀವೇ ಜವಾಬ್ದಾರರು ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Video Top Stories