ಅರಣ್ಯಾಧಿಕಾರಿಗಳ ಎಡವಟ್ಟು: ಪ್ರವಾಸಿಗರಿಗೆ ಮೋಜುಮಸ್ತಿ, ಗ್ರಾಮಸ್ಥರಿಗೆ ಕೆಸರು ರಸ್ತೆ

ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಗ್ರಾಮಸ್ಥರು  ಪರದಾಡುವ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲುಗೋಡು, ಅಬ್ಬುಕುಡಿಗೆ ಗ್ರಾಮದಲ್ಲಿ ರಸ್ತೆ ಇಲ್ಲದೆ ಜನರು ಪರದಾಡುವಂತಾಗಿದೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಜು.13): ಅರಣ್ಯಾಧಿಕಾರಿಗಳ ಎಡವಟ್ಟಿನಿಂದ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲುಗೋಡು, ಅಬ್ಬುಕುಡಿಗೆ ಗ್ರಾಮದಲ್ಲಿ ರಸ್ತೆ ಇಲ್ಲದೆ ಜನರು ಪರದಾಡುವಂತಾಗಿದೆ. ಕಳೆದ ಒಂದು ವಾರದಿಂದ ಕಳಸ ತಾಲೂಕಿನ ಹಲವು ಭಾಗಗಳಲ್ಲ ನಿರಂತರ ಮಳೆಯಾಗುತ್ತಿದ್ದು, ಸಮೀಪದ ಸುರ ಮನೆ ಜಲಪಾತ ವೀಕ್ಷಣೆಗೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ನಿತ್ಯವೂ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಸಂಪೂರ್ಣ ರಸ್ತೆ ಹದಗೆಟ್ಟು ಕೆಸರುಮಯವಾಗಿದೆ. ಮೊದಲೇ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡಲು ಕಷ್ಟವಾಗಿತ್ತು. ಆದರೆ ಇದೀಗ ನಿರಂತರ ವಾಹನಗಳ ಸಂಚಾರದಿಂದ ಗ್ರಾಮಸ್ಥರ ಪಾಡು ಕೇಳುವವರೇ ಇಲ್ಲದಂತಾಗಿದೆ.

Related Video