Attack on Teacher: ಶಿಕ್ಷಕರಿಗೇ ಹೊಡೆದ ವಿದ್ಯಾರ್ಥಿಗಳಿಂದ ಗುರುವಿನ ಪಾದ ಮುಟ್ಟಿ ಕ್ಷಮೆ
ಬುದ್ಧಿ ಹೇಳುತ್ತಾರೆಂಬ ಕಾರಣಕ್ಕೆ ಶಿಕ್ಷಕರೊಬ್ಬರ (Teacher) ವಿರುದ್ಧ ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳ (Students) ಗುಂಪೊಂದು ಶಿಕ್ಷಕನ ತಲೆಗೆ ಕಸದ ಬುಟ್ಟಿಹಾಕಿ, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ (Chennagiri) ತಾಲೂಕಿನ ನಲ್ಲೂರು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ (High School) ವಿಭಾಗದಲ್ಲಿ ನಡೆದಿದೆ.
ದಾವಣಗೆರೆ (ಡಿ. 11): ಬುದ್ಧಿ ಹೇಳುತ್ತಾರೆಂಬ ಕಾರಣಕ್ಕೆ ಶಿಕ್ಷಕರೊಬ್ಬರ (Teacher) ವಿರುದ್ಧ ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳ (Students) ಗುಂಪೊಂದು ಶಿಕ್ಷಕನ ತಲೆಗೆ ಕಸದ ಬುಟ್ಟಿಹಾಕಿ, ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಚನ್ನಗಿರಿ(Chennagiri) ತಾಲೂಕಿನ ನಲ್ಲೂರು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆ (High School) ವಿಭಾಗದಲ್ಲಿ ನಡೆದಿದೆ.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ಹಿಂದಿ ಸಹ ಶಿಕ್ಷಕ ಪ್ರಕಾಶ ಬೋಗಾರ್ ಅವರೇ ವಿದ್ಯಾರ್ಥಿಗಳಿಂದ ಅವಮಾನ ಹಾಗೂ ಹಲ್ಲೆಗೆ ಗುರಿಯಾದ ಶಿಕ್ಷಕ. 10ನೇ ತರಗತಿಯ 3-4 ಮಂದಿ ಕಿಡಿಗೇಡಿ ವಿದ್ಯಾರ್ಥಿಗಳ ಗುಂಪು ಈ ಕೃತ್ಯ ಎಸಗಿದೆ. ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಶಾಲೆಗೆ ಬಂದು ಮಕ್ಕಳಿಗೆ ಬುದ್ಧಿ ಹೇಳಿದರು. ಗುರುಗಳ ಪಾದಕ್ಕೆ ಬಿದ್ದು ಕ್ಷಮೆ ಕೇಳಿಸಿದರು. ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಧಿಕಾರಿಗಳ ಸಭೆ ನಡೆಸಿ ಅಂತಹ ವಿದ್ಯಾರ್ಥಿಗಳ ಫೋಷಕರ ಸಭೆ ಕರೆದು, ಆ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳಿಸುವಂತೆ ಸೂಚನೆ ನೀಡಿದ್ದಾರೆ.