Asianet Suvarna News Asianet Suvarna News

Russia-Ukraine War: ನವೀನ್ ಸಾವಿಗೂ ಮುನ್ನ ನಡೆದಿದ್ದೇನು..? ಸ್ನೇಹಿತನ ಮಾತು

 ಕಳೆದ 6 ದಿನಗಳಿಂದ ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ಕನ್ನಡಿಗ ವಿದ್ಯಾರ್ಥಿಯನ್ನು ಬಲಿ ಪಡೆದಿದೆ.ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಸಾವಿಗೀ​ಡಾ​ಗಿ​ದ್ದಾ​ರೆ.

 ಕಳೆದ 6 ದಿನಗಳಿಂದ ರಷ್ಯಾ ಮತ್ತು ಉಕ್ರೇನ್‌ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ಕನ್ನಡಿಗ ವಿದ್ಯಾರ್ಥಿಯನ್ನು ಬಲಿ ಪಡೆದಿದೆ. ಉಕ್ರೇನ್‌ನ ಖಾರ್ಕೀವ್‌ನ ಕಟ್ಟಡವೊಂದನ್ನು ಗುರಿಯಾಗಿಸಿ ಮಂಗಳವಾರ ಬೆಳಗ್ಗೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಸಾವಿಗೀ​ಡಾ​ಗಿ​ದ್ದಾ​ರೆ. ಇವರು ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಸಾವಿಗೀಡಾದ ಮೊದಲ ಭಾರತೀಯ. 

ಖಾರ್ಕೀ​ವ್‌ ರಾಷ್ಟ್ರೀಯ ವೈದ್ಯ​ಕೀಯ ಕಾಲೇ​ಜಿ​ನಲ್ಲಿ ಎಂಬಿ​ಬಿ​ಎಸ್‌ ಓದು​ತ್ತಿ​ರುವ ನವೀನ್‌ ಯುದ್ಧದ ಹಿನ್ನೆ​ಲೆ​ಯಲ್ಲಿ ಕಳೆದ ಕೆಲ ದಿನ​ಗ​ಳಿಂದ ಬಂಕ​ರ್‌ವೊಂದ​ರಲ್ಲಿ ಆಶ್ರಯ ಪಡೆ​ದಿ​ದ್ದರು. ಈ ವೇಳೆ ಸಂಗ್ರ​ಹಿ​ಸಿ​ಟ್ಟು​ಕೊಂಡಿದ್ದ ಆಹಾ​ರ​ವೆಲ್ಲ ಖಾಲಿ​ಯಾಗಿ ಪರ​ದಾಟ ಅನು​ಭ​ವಿ​ಸು​ತ್ತಿದ್ದ ಹಿನ್ನೆಲೆ​ಯಲ್ಲಿ ಆಹಾರ ವಸ್ತು​ಗ​ಳನ್ನು ಖರೀ​ದಿ​ಸಲು ಬಂಕರ್‌ ಸಮೀ​ಪದ ದಿನಸಿ ಅಂಗ​ಡಿ​ಯೊಂದಕ್ಕೆ ತೆರ​ಳಿ​ದ್ದರು. ಇದೇ ಸಂದ​ರ್ಭ​ದಲ್ಲಿ ರಷ್ಯಾ ಪಡೆ​ಗಳು ನಡೆ​ಸಿದ ಶೆಲ್‌ ದಾಳಿಗೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾ​ರೆ' ಎಂದು ನವೀನ್ ಸ್ನೇಹಿತ ಯಶವಂತ್ ಘಟನೆಯನ್ನು ವಿವರಿಸಿದ್ದಾರೆ. 

Video Top Stories