
ಕೊರೊನಾ ಕೈ ಮೀರುತ್ತಿದೆ, ಮನೆಯಲ್ಲೇ ಇರಿ, ಸೇಫಾಗಿರಿ; ಕೊರೋನಾ ವಾರಿಯರ್ ಕಳಕಳಿಯ ಮನವಿ
ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಸರ್ಕಾರದ ಜೊತೆ ನೂರಾರು ಸಂಸ್ಥೆ ಮತ್ತು ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಕೆಲ್ಸ ಮಾಡುತಿದ್ದಾರೆ. ಅವುಗಳಲ್ಲಿ 24X7 ಕೆಲ್ಸ ಮಾಡುವ ಬೆಂಗಳೂರಿನ ಮರ್ಸಿ ಮಿಷನ್ ಕೂಡಾ ಒಂದು.
ಬೆಂಗಳೂರು (ಏ. 19): ಕೊರೊನಾ 2 ನೇ ಕೈ ಮೀರುತ್ತಿದೆ, ಅದರಲ್ಲೂ ಬೆಂಗಳೂರಿನಲ್ಲಿ ಕಂಟ್ರೋಲ್ ತಪ್ಪಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಐಸಿಯು ಇಲ್ಲ, ಸೋಂಕಿತರ ಪರದಾಟ ಹೇಳತೀರದಾಗಿದೆ. ಈ ವಿಪತ್ತಿನ ಸಂದರ್ಭದಲ್ಲಿ ಸರ್ಕಾರದ ಜೊತೆ ನೂರಾರು ಸಂಸ್ಥೆ ಮತ್ತು ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಕೆಲ್ಸ ಮಾಡುತಿದ್ದಾರೆ. ಅವುಗಳಲ್ಲಿ 24X7 ಕೆಲ್ಸ ಮಾಡುವ ಬೆಂಗಳೂರಿನ ಮರ್ಸಿ ಮಿಷನ್ ಕೂಡಾ ಒಂದು.
ವಿದೇಶಗಳಿಂದ 50 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಆಮದು, 10 ಆಸ್ಪತ್ರೆಗಳಲ್ಲಿ ಉತ್ಪಾದನಾ ಘಟಕ.!
ಕಳೆದ ವರ್ಷ ಲಾಕ್‌ಡೌನ್ ಆರಂಭವಾಗಿದಿನಿಂದ, ಕಾರ್ಮಿಕರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುವಳಿದವರಿಗೆ ಊಟ/ಆಹಾರ ವಸ್ತುಗಳ ವ್ಯವಸ್ಥೆ ಮಾಡುವುದರಿಂದ ಹಿಡಿದು, ಕೊರೋನಾ ಜಾಗೃತಿ, ಮಾಹಿತಿ/ಸೇವಾಕೇಂದ್ರ, ಹೆಲ್ಪ್‌ಲೈನ್ ಆಕ್ಸಿಜನ್ ಸೆಂಟರ್, ಅಂಬ್ಯುಲೆನ್ಸ್, ಪ್ಲಾಸ್ಮಾ ದಾನ ಮತ್ತು ಮೃತವ್ಯಕ್ತಿಗಳ ಅಂತ್ಯಕ್ರಿಯೆ ನಡೆಸುವಲ್ಲಿ ಈ ಸಂಸ್ಥೆ ಅವಿರತವಾಗಿ, ಹಗಲು-ರಾತ್ರಿ ಈ ಮರ್ಸಿ ಮಿಷನ್ ಸಂಸ್ಥೆಯ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಕೈಮೀರುತ್ತಿರುವ ಈ ಸಂದರ್ಭದಲ್ಲಿ ಮರ್ಸಿ ಮಿಷನ್ ಸಂಚಾಲಕ ಅಮೀನ್ ಮುದಸ್ಸಿರ್ ಭಾವುಕವಾಗಿ ಸರ್ಕಾರ ಮತ್ತು ಜನರಿಗೆ ಆದಷ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿಮಾಡಿದ್ದಾರೆ.