News Hour: ರಕ್ಷಾಬಂಧನ ಹಬ್ಬದ ದಿನವೇ ಮನೆಗೆ ಬಂದ ಗೃಹಲಕ್ಷ್ಮೀ!
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನೆಯದಾಗಿದ್ದ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಚಾಲನೆ ಸಿಕ್ಕಿದೆ. ಮೈಸೂರಿನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸರ್ಕಾರದ ನಾಲ್ಕನೇ ಗ್ಯಾರಂಟಿಗೆ ಚಾಲನೆ ಸಿಕ್ಕಿದೆ.
ಬೆಂಗಳೂರು (ಆ.30): ರಕ್ಷಾಬಂಧನದ ಹಬ್ಬದ ದಿನವೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಜಾರಿಗೆ ಬಂದಿದೆ. ಮೈಸೂರಲ್ಲಿ ಸರ್ಕಾರ ತನ್ನ ನಾಲ್ಕನೇ ಗ್ಯಾರಂಟಿಗೆ ಚಾಲನೆ ನೀಡಿತು. ತಮ್ಮ ಐದು ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿ ಎಂದು ರಾಹುಲ್ ಗಾಂಧಿ ಈ ವೇಳೆ ಹೇಳಿದ್ದಾರೆ.
ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಎನಿಸಿಕೊಂಡಿದ್ದ ರಾಜ್ಯದ ಪ್ರತಿ ಯಜಮಾನಿಯ ಅಕೌಂಟ್‌ಗೆ 2 ಸಾವಿರ ರೂಪಾಯಿಯ ಗ್ಯಾರಂಟಿಗೆ ಚಾಲನೆ ಸಿಕ್ಕಿದೆ ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿಗಳ ಪೈಕಿ ನಾಲ್ಕನೇ ಇದಾಗಿತ್ತು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದರು.
ಮಹಿಳೆಯರೇ ಕರ್ನಾಟಕದ ಶಕ್ತಿ, 4 ಗ್ಯಾರೆಂಟಿ ಮಹಿಳಾ ಸಬಲೀಕರಣಕ್ಕೆ ಮೀಸಲು, ರಾಹುಲ್ ಗಾಂಧಿ!
ಇನ್ನು ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಲು ಆಯ್ಕೆ ಮಾಡಿಕೊಂಡ ಸ್ಥಳಗಳೂ ಕೂಡ ಲೆಕ್ಕಾಚಾರದಿಂದ ಕೂಡಿದೆ. ಈ ಬಾರಿ ಮೈಸೂರಿನಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಲೋಕಸಭೆಯ ಲೆಕ್ಕಾಚಾರವನ್ನು ವರ್ಕ್‌ಔಟ್ ಮಾಡಿಕೊಂಡಿದೆ.