Asianet Suvarna News Asianet Suvarna News

ಬೆಂಗಳೂರಲ್ಲಿ ಒಂದೇ ದಿನ 743 ಹೊಸ ರಸ್ತೆಗಳು ಸೀಲ್‌ಡೌನ್

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಭಾಗವಾಗಿ ಒಂದೇ ದಿನ ನಗರದಲ್ಲಿ 743 ಹೊಸ ರಸ್ತೆಗಳನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. 

ಬೆಂಗಳೂರು(ಜು.25): ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಒಂದೇ ದಿನ ನಗರದಲ್ಲಿ ಏಳುನೂರಕ್ಕೂ ಹೆಚ್ಚು ರಸ್ತೆಗಳು ಸೀಲ್‌ಡೌನ್ ಮಾಡಲಾಗಿದೆ.

ಹೌದು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಭಾಗವಾಗಿ ಒಂದೇ ದಿನ ನಗರದಲ್ಲಿ 743 ಹೊಸ ರಸ್ತೆಗಳನ್ನು ಬಿಬಿಎಂಪಿ ಸೀಲ್‌ಡೌನ್ ಮಾಡಿದೆ. 

ಮಂಗಳೂರು-ಮುಂಬೈ ವಿಮಾನಯಾನ ಆರಂಭ, ಕೆಲವು ಪ್ರಯಾಣಿಕರಿಗೆ ಕ್ವಾರೆಂಟೈನ್ ಇಲ್ಲ

ಉದ್ಯಾನನಗರಿಯಲ್ಲಿ 12854 ಇದ್ದ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಇದೀಗ 13,600ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಬರುವ 198 ವಾರ್ಡ್‌ಗಳಲ್ಲೂ ಕೊರೋನಾ ಕೇಕೆ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories