ಮಂಗಳೂರು ಭದ್ರತೆಗೆ ಸಿಸಿ ಕ್ಯಾಮೆರಾಗಳೇ ಡೇಂಜರ್: ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಭದ್ರತಾ ಲೋಪ ಅಪಸ್ವರ
ಮಂಗಳೂರು ಭದ್ರತೆಗೆ ಸಿಸಿಟಿವಿ ಕ್ಯಾಮೆರಾಗಳೇ ಡೇಂಜರ್ ಆಗಿದ್ದು, ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ಭದ್ರತಾ ಲೋಪ ಅಪಸ್ವರ ಕೇಳಿ ಬಂದಿದೆ.
ಮಂಗಳೂರು: ಮಂಗಳೂರು ಭದ್ರತೆಗೆ ಚೀನಾ ಕಂಪನಿಗಳ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಕಮಾಂಡ್ ಕಂಟ್ರೋಲ್ ಸೆಂಟರ್ ಯೋಜನೆಯಡಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, 23 ಕೋಟಿ ರೂಪಾಯಿಯ ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಭಾರತದಲ್ಲಿ ಸರ್ಕಾರಿ ಟೆಂಡರ್'ಗಳಲ್ಲಿ ಹಿಕ್ವಿಷನ್ ಕಂಪನಿಗೆ ನಿರ್ಬಂಧವಿದ್ದು, ಅಮೇರಿಕಾ ಯುಕೆಯಲ್ಲಿ ಬ್ಯಾನ್ ಆದ ಕಂಪನಿಗೆ ಮಂಗಳೂರು ಪಾಲಿಕೆ ಮಣೆ ಹಾಕಿದೆ. ಕಡಿಮೆ ದರದ ಚೀನಾ ಸಿಸಿ ಕ್ಯಾಮೆರಾ ಅಳವಡಿಸಿ ಗೋಲ್ ಮಾಲ್ ಮಾಡಿರುವ ಆರೋಪ ಕೇಳಿ ಬಂದಿದೆ. ದೇಶದ ಆಂತರಿಕ ಭದ್ರತೆಗೆ ಅಪಾಯದ ಹಿನ್ನೆಲೆ ಚೀನಾ ಸಿಸಿ ಕ್ಯಾಮೆರಾಗಳಿಗೆ ನಿರ್ಬಂಧವಿದೆ. ವೈಯಕ್ತಿಕ ಡಾಟಾ ಕಳುವು, ಗುಪ್ತ ಮಾಹಿತಿ ಕಳವು ಹಿನ್ನೆಲೆ ನಿಷೇಧ ಹೇರಲಾಗಿದೆ.