ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಮುಂದಾದ ಸರ್ಕಾರ: ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧ

ಕನ್ನಡ ನಾಡಿನ ಐತಿಹಾಸಿಕ ಪರಂಪರೆ ಸಾರುವ ಐತಿಹಾಸಿಕ ತಾಣಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಸ್ಮಾರಕ ಮಿತ್ರ ಎಂಬ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದ್ರೆ ಸರ್ಕಾರದ ಈ ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧವೂ ಸಹ ವ್ಯಕ್ತವಾಗಿದೆ. 

First Published Dec 8, 2023, 10:28 AM IST | Last Updated Dec 8, 2023, 10:28 AM IST

ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ(Bagalkot) ಐತಿಹಾಸಿಕ ಪರಂಪರೆಯ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಸೇರಿದಂತೆ ಅನೇಕ ತಾಣಗಳ ಅಭಿವೃದ್ದಿ ಇಂದಿಗೂ ಪೂರ್ಣವಾಗಿಲ್ಲ. ಈ ಮಧ್ಯೆ ಸರ್ಕಾರ(Government) ಖಾಸಗಿ ಸಹಭಾಗಿತ್ವದಲ್ಲಿ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ. ಸ್ಮಾರಕ ಮಿತ್ರ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ(Department of Tourism) ಮೂಲಕ ಜಾರಿಗೆ ಮುಂದಾಗಿದೆ. ಖಾಸಗಿ ಕಂಪನಿಗಳ ನಿಧಿ ವಿನಿಯೋಗಿಸಿ ಎಲ್ಲಾ ಸ್ಮಾರಕ ಅಭಿವೃದ್ಧಿ ಮಾಡ್ತೇವೆ ಅಂತ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್(HK Patil) ಹೇಳಿದ್ರು.ಐತಿಹಾಸಿಕ ತಾಣಗಳನ್ನು ಖಾಸಗಿಯವರಿಗೆ ಟೆಂಡರ್ ಮೂಲಕ ದತ್ತು ನೀಡಲು ಮುಂದಾಗಿರೋದು ಕೆಲವು ಕನ್ನಡ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ. ಐಹೊಳೆ, ಪಟ್ಟದಕಲ್ಲು ತಾಣಗಳನ್ನು ಸ್ಥಳಾಂತರ ಜೊತೆ ಇನ್ನೂ ಸಮಸ್ಯೆಗಳಿವೆ. ಹಾಗೆಯೇ ಖಾಸಗಿಯವರಿಗೆ ನೀಡಿದ್ರೆ ಉಳಿದ ಕೆಲಸಗಳು ಆಗೋದಿಲ್ಲ. ಹೀಗಾಗಿ ಸರ್ಕಾರವೇ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಾಗುತ್ತೆ. ಸರ್ಕಾರ ಖಾಸಗಿಯವರಿಗೆ ತಾಣಗಳನ್ನ ಬಿಟ್ಟುಕೊಟ್ಟು ಟೆಂಡರ್ ಮೂಲಕ ಹಣ ಹೊಡೆಯುವ ಷಡ್ಯಂತ್ರ ನಡೆಸ್ತಿದ್ದಾರೆ ಎಂದು ಆತ್ಮರಾವ್ ಆರೋಪಿಸಿದ್ದಾರೆ. ಸ್ಮಾರಕ ಮಿತ್ರ ಯೋಜನೆ ಮೂಲಕ ಐತಿಹಾಸಿಕ ತಾಣಗಳನ್ನ ಖಾಸಗಿಯವರಿಗೆ ವಹಿಸಲು ಮುಂದಾಗಿರೋದು ಒಳ್ಳೆಯದೇ. ಆದ್ರೆ, ಐತಿಹಾಸಿಕ ತಾಣಗಳ ಸಮಸ್ಯೆಗಳನ್ನ ಬಗೆಹರಿಸಲಿ ಅನ್ನೋದು ಜನರ ಆಶಯ.

ಇದನ್ನೂ ವೀಕ್ಷಿಸಿ:  ರೇಷ್ಮೆ ಬೆಳೆ ನಂಬಿದ ರೈತರಿಗೆ ಬಿಗ್‌ ಶಾಕ್‌: ಗೂಡು ಕಟ್ಟದೆ ಹುಳುಗಳ ಸಾವು !