ಧರ್ಮಸ್ಥಳದ 8 ಸ್ಥಳ ಶೋಧ: ಸಿಕ್ಕಿದ್ದು 1 ಅಸ್ಥಿಪಂಜರ : ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ

ಧರ್ಮಸ್ಥಳದಲ್ಲಿ ನಡೆದ ಶೋಧ ಕಾರ್ಯದಲ್ಲಿ ಎಂಟು ಸ್ಥಳಗಳನ್ನು ಅಗೆದು ಪರಿಶೀಲಿಸಲಾಯಿತು. ಒಂದು ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದ್ದು, ಅದರ ವೈಜ್ಞಾನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿಯು ತನಿಖೆಯ ಮುಂದಿನ ಹಂತವನ್ನು ನಿರ್ಧರಿಸಲಿದೆ.

Share this Video
  • FB
  • Linkdin
  • Whatsapp

ಧರ್ಮಸ್ಥಳದಲ್ಲಿ ಇಂದು 5ನೇ ದಿನವೂ ಶೋಧ ಮುಂದುವರೆಯಲಿದೆ. ಇದುವರೆಗೆ 8 ಸ್ಥಳಗಳಲ್ಲಿ ಹೊಂಡ ಅಗೆಯಲಾಗಿದ್ದು, ಕೇವಲ 1 ಸ್ಥಳದಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. ಸಿಕ್ಕ ಅಸ್ತಿಪಂಜರದ ವೈಜ್ಞಾನಿಕ ವಿಶ್ಲೇಷಣೆಯೇ ಈಗ ಸವಾಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅಸ್ಥಿಪಂಜರ ರವಾನೆ ಮಾಡಲಾಗಿದ್ದು, ಅಲ್ಲಿನ ಫೋರೆನ್ಸಿಕ್ ವರದಿ ಮೇಲೆ ಎಸ್​ಐಟಿ ತನಿಖೆ ನಿಂತಿದೆ. ಮೊದಲಿಗೆ ಹೇಗೆ ಸಾವು ಸಂಭವಿಸಿತು ಎಂದು FSL ತನಿಖೆ ನಡೆಯಲಿದೆ. ಇದು ಸಹಜ ಸಾವೋ? ಕೊಲೆಯೋ? ವ್ಯಕ್ತಿಯ ಎತ್ತರ.. ವ್ಯಕ್ತಿಯ ತೂಕ.. ವಯಸ್ಸು ಪತ್ತೆ ಮಾಡಲಿದ್ದಾರೆ. ಇದಕ್ಕಾಗಿ ರೇಡಿಯೋ ಕಾರ್ಬನ್ ಡೇಟಿಂಗ್ ಮಾಡಲಿರೋ FSL ಟೀಂ ಈ ಮೂಲಕ ಅಸ್ಥಿ ಪಂಜರದ ಅವಧಿ ಪತ್ತೆ ಹಚ್ಚೋ ಸಾಧ್ಯತೆ ಇದೆ ಹಗೂ ವ್ಯಕ್ತಿಯ ಗುರುತು ಪತ್ತೆಗೆ FSLನಿಂದ ಮೂಳೆಯ ಡಿಎನ್​ಎ ಪರೀಕ್ಷೆ ನಡೆಯಲಿದ್ದು, 15 ದಿನಗಳಲ್ಲಿ FSLನಿಂದ ಮಧ್ಯಂತರ ವರದಿ ನೀಡುವ ಸಾಧ್ಯತೆ ಇದೆ.
ಅಂತಿಮ ವರದಿಗೆ 45-60 ದಿನಗಳು ತೆಗೆದುಕೊಳ್ಳೋ ಸಾಧ್ಯತೆ ಇದ್ದು, FSL ವರದಿ ಆಧರಿಸಿ ಎಸ್​ಐಟಿ ತನಿಖೆ ಮುಂದುವರೆಸಲಿದೆ.

Related Video