ಮುಂದಿನ ಸಿಎಂ ಚರ್ಚೆ: ಮನೆಯೊಂದು, ಮೂರು ಬಾಗಿಲಾಯ್ತು ಕಾಂಗ್ರೆಸ್..!
- ಮುಂದಿನ ಸಿಎಂ ವಿಚಾರ: ಸಿದ್ದರಾಮಯ್ಯ - ಡಿಕೆಶಿ ಬಣಗಳ ನಡುವೆ ತಂತ್ರ-ಪ್ರತಿತಂತ್ರ
- ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಗುಂಪು ಸಭೆ
- ಕಾಂಗ್ರೆಸ್ ಮುಂದಿನ ನಡೆ ಕುತೂಹಲ ಮೂಡಿಸಿದೆ
ಬೆಂಗಳೂರು (ಜೂ. 28): ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ನಡುವೆ ಮುಂದಿನ ಸಿಎಂ ವಿಚಾರದಲ್ಲಿ ತಂತ್ರ-ಪ್ರತಿತಂತ್ರಗಳು ನಡೆಯುತ್ತಿದೆ. 'ನಾನೇ ಮುಂದಿನ ಸಿಎಂ' ಎಂದು ಬಹಿರಂಗ ಹೇಳಿಕೆ ಕೊಡಬೇಡಿ ಎಂದು ಸಿದ್ದರಾಮಯ್ಯ ಕೇಳಿಕೊಂಡರೂ, ಬೆಂಬಲಿಗರು ಪದೇ ಪದೇ ಸಿದ್ದು ಸಿಎಂ ಮಂತ್ರ ಜಪಿಸುತ್ತಿದ್ಧಾರೆ. ಇದು ಡಿಕೆಶಿ ಅಸಮಾಧಾನಕ್ಕೂ ಕಾರಣವಾಗಿದೆ. ಸಿದ್ದು ಬೆಂಬಲಿಗರಿಗೆ ವಾರ್ನ್ ಕೂಡಾ ಮಾಡಿದ್ದಾರೆ.
ಸಿಎಂ ಗಾದಿಗೆ ಟವೆಲ್ ಹಾಕಿದ ಮತ್ತೋರ್ವ ಕಾಂಗ್ರೆಸ್ ನಾಯಕ
ಇದರ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ನಿವಾಸದಲ್ಲಿ ಮೂಲ ಕಾಂಗ್ರೆಸ್ಸಿಗರ ಗುಂಪು ಸಭೆ ನಡೆಸಿದೆ. ಕೆ.ಎಚ್. ಮುನಿಯಪ್ಪ ನಿವಾಸದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೆ.ಎಚ್. ಮುನಿಯಪ್ಪ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇವೆಲ್ಲದರ ಬಗ್ಗೆ ಒಂದು ಇನ್‌ಸೈಡ್ ಸುದ್ದಿ ಇಲ್ಲಿದೆ ನೋಡಿ.